ಪ್ರಿಯಾಂಕಾ ಚೋಪ್ರಾ ಹೇಳಲಿದ್ದಾರೆ ‘ಒಂದು ವಿಷಯ’

7

ಪ್ರಿಯಾಂಕಾ ಚೋಪ್ರಾ ಹೇಳಲಿದ್ದಾರೆ ‘ಒಂದು ವಿಷಯ’

Published:
Updated:
Prajavani

ಚಿತ್ರರಂಗದ ಪಯಣ ಮತ್ತು ಮದುವೆ ಸುದ್ದಿಗಳಿಂದ ಹೊರಬಂದಿರುವ ಪ್ರಿಯಾಂಕಾ ಚೋಪ್ರಾ ವೃತ್ತಿರಂಗದ ಎರಡನೇ ಇನಿಂಗ್ಸ್‌ ಶುರು ಮಾಡಿಯೇಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸದಾ ತಮ್ಮ ಅಭಿಮಾನಿಗಳೊಂದಿಗೆ ಸ್ನೇಹ ಸಂಪಾದಿಸುವ ಪಿಗ್ಗಿ ಈಗ ಅದೇ ವೇದಿಕೆಯಲ್ಲಿ ಹೊಸ ಸಾಹಸ ಮಾಡಲಿದ್ದಾರೆ.

ಯೂ ಟ್ಯೂಬ್‌ನಲ್ಲಿ ಅವರು ‘ಇಫ್‌ ಐ ಕುಲ್‌ ಟೆಲ್‌ ಯು ಜಸ್ಟ್‌ ಒನ್‌ ಥಿಂಗ್‌’ ಎಂಬ ಶೋ ನಡೆಸಲಿದ್ದಾರೆ. ತಮ್ಮ ಆಪ್ತರು, ಸಮಾನ ಮನಸ್ಕರು, ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆಗೆ ಈ ಶೋ ಮೂಲಕ ಪಿಗ್ಗಿ ಸಂವಾದ ನಡೆಸಲಿದ್ದಾರೆ. ಈ ಶೋದ ಆಕರ್ಷಣೆ ಏನೆಂದರೆ, ಪ್ರಸ್ತುತ ದಿನಗಳಲ್ಲಿ ತಾವು ಏನಾಗಿದ್ದೇವೆ ಎಂಬುದರ ಬಗ್ಗೆ ಸಂವಾದಿಗಳು ‘ಒಂದು ಮಾತು’ ಹಂಚಿಕೊಳ್ಳಲಿದ್ದಾರೆ. ಈ ಶೋ ಪ್ರಿಯಾಂಕಾ ಅವರ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಲೈವ್‌ ಪ್ರಸಾರವಾಗಲಿದೆ.

ಈ ವಿವರವನ್ನು ಸ್ವತಃ ಪ್ರಿಯಾಂಕಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಅತಿಥಿಗಳಿಗೆ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಕಾರ್ಯಕ್ರಮವನ್ನು ಹೇಗೆ ಸಮರ್ಪಕವಾಗಿಸಬಹುದು ಎಂದು ಸಲಹೆ ನೀಡುವಂತೆಯೂ ಅವರು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ವಿಶ್ವ ಮಹಿಳಾ ಜಿಮ್ನಾಸ್ಟಿಕ್‌ ಪಟು ಸಿಮೋನ್ ಬೈಲ್ಸ್‌ ಈ ಶೋದಲ್ಲಿ ಮೊದಲ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ‘ಸಿಮೋನ್‌ ಅದ್ಭುತ ಕ್ರೀಡಾಪಟು. ಆಕೆ ಒಂದು ಮೌನದ ನಂತರ ದೊಡ್ಡ ಮಟ್ಟದ ಸಾಧನೆಯ ಮೂಲಕ ಮಾತನಾಡುತ್ತಾಳೆ. ಆಕೆಯ ಬಗ್ಗೆ ಯಾವಾಗಲೂ ಅಭಿಮಾನಪಡುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ವಿಡಿಯೊದಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ‘ಒಂದು ವೇಳೆ ಚಿಕನ್‌ ವಿಂಗ್ಸ್‌ ತಿನ್ನುವ ಸ್ಪರ್ಧೆ ಇದ್ದರೆ ನಾನು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತೇನೆ’ ಎಂದು ನಗೆಚಟಾಕಿ ಹಾರಿಸಿದ್ದಾರೆ.

ಮತ್ತೊಂದು ಹಾಲಿವುಡ್‌ ಚಿತ್ರ ತೆರೆಗೆ

ಪ್ರಿಯಾಂಕಾ ಚೋಪ್ರಾ ಜೊನಾಸ್‌ ನಟಿಸಿರುವ ಹಾಲಿವುಡ್‌ನ ಮೂರನೇ ಚಿತ್ರ ಫೆಬ್ರುವರಿ 13ರಂದು ಅಮೆರಿಕದಲ್ಲಿ  ಬಿಡುಗಡೆಯಾಗಲಿದೆ. 'Isn't it Romantic' ಎಂಬ ಈ ಚಿತ್ರದಲ್ಲಿ ಅವರು ಇಸಾಬೆಲ್ಲ ಎಂಬ ಯೋಗ ರಾಯಭಾರಿಯ ಪಾತ್ರ ಮಾಡಿದ್ದಾರೆ.

ಹಾಲಿವುಡ್‌ನ ಖ್ಯಾತ ನಟಿ ರೆಬೆಲ್ ವಿಲ್ಸನ್‌ ಈ ಚಿತ್ರದ ನಾಯಕಿ. ತಲೆಗೆ ಏಟು ಬಿದ್ದ ಯುವತಿಯೊಬ್ಬಳಿಗೆ ಪ್ರಜ್ಞೆ ಬಂದ ಮೇಲೆ ಪ್ರಪಂಚದಲ್ಲಿ ನಡೆಯುವುದೆಲ್ಲವೂ ರೊಮ್ಯಾಂಟಿಕ್‌ ಕಾಮಿಡಿಯಾಗಿ ಕಾಣಿಸುವುದು ಈ ಚಿತ್ರದ ತಿರುಳು. ಅಮೆರಿಕದಲ್ಲಿ ತೆರೆ ಕಂಡ ಬಳಿಕ ಈ ಸಿನಿಮಾವನ್ನು ಬ್ರಿಟನ್‌ನಲ್ಲಿ ನೆಟ್‌ಫ್ಲಿಕ್ಸ್‌ಗೆ ಬಿಡುಗಡೆ ಮಾಡಲಾಗುವುದು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !