ಬುಧವಾರ, ಏಪ್ರಿಲ್ 21, 2021
23 °C

ಪ್ರಿಯಾಂಕಾ ಚೋಪ್ರಾಗೆ ಅಡುಗೆ ಮಾಡಲು‌ ಬರೋದಿಲ್ವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಗಾಯಕ ನಿಕ್ ಜೋನ್ಸ್ ವೈವಾಹಿಕ ಬದುಕು ಆರಂಭಿಸಿ ಎರಡು ವರ್ಷಗಳು ಸಂದಿವೆ‌‌.

ಈ‌ ಜೋಡಿ ಯಾವುದೇ ಶುಭ ಸಮಾರಂಭಗಳು, ಪ್ರವಾಸಿ ತಾಣಗಳಿಗೆ ಹೋದರೂ ಸಾಮಾಜಿಕ ಜಾಲತಾಣದಲ್ಲಿ ಅಲ್ಲಿನ ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಅಭಿಮಾನಿಗಳು ಕೂಡ ತರೇಹವಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೊರೊನಾ ಸೋಂಕಿನ ಭೀತಿಯಿಂದ ಅಮೆರಿಕದಲ್ಲಿ ಈ ಇಬ್ಬರೂ ಈಗ ಪ್ರತ್ಯೇಕವಾಗಿ ಕಾಲದೂಡುತ್ತಿದ್ದಾರಂತೆ.

ಇತ್ತೀಚೆಗೆ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ತನ್ನ ಅಡುಗೆ ಕೌಶಲದ ಬಗ್ಗೆ ಹೇಳಿರುವ ಮಾತು ಕೌತುಕದ ಕೇಂದ್ರಬಿಂದುವಾಗಿದೆ. ಆಕೆಯ ಅಜ್ಜಿಗೆ ಪ್ರಿಯಾಂಕಾಳ ಮದುವೆ ಬಗ್ಗೆಯೇ ಚಿಂತೆ ಇತ್ತಂತೆ. 'ಆಕೆಗೆ ಅಡುಗೆ ಮಾಡಲು ಬರುವುದಿಲ್ಲ; ನನ್ನ ಮೊಮ್ಮಗಳನ್ನು ಯಾರು ಮದುವೆಯಾಗುತ್ತಾರೆ' ಎಂದು ಹೇಳುತ್ತಿದ್ದರಂತೆ. ಇದಕ್ಕೆ ಪ್ರಿಯಾಂಕಾ ಅವರ ತಂದೆ, 'ನೀನು ಅವಳ ಬಗ್ಗೆ ಚಿಂತಿಸಬೇಡ. ಮದುವೆಯಾದ ತಕ್ಷಣವೇ ಆಕೆಯ ಗಂಡನ‌ ಮನೆಗೆ ಅಡುಗೆ‌ ಮಾಡುವನನ್ನೂ ಕಳುಹಿಸುತ್ತೇನೆ' ಎಂದು ಹೇಳುತ್ತಿದ್ದರಂತೆ. 

ಸಂದರ್ಶನದಲ್ಲಿ ಆಕೆ ಇಷ್ಟನ್ನೇ ಹೇಳಿಲ್ಲ. 'ನನ್ನ ಅಮ್ಮನಿಗೂ ಮದುವೆಯಾದ‌‌ ಹೊಸತರಲ್ಲಿ‌ ಅಡುಗೆ ಮಾಡಲು ಬರುತ್ತಿರಲಿಲ್ಲ. ಇದರಿಂದ ಅಪ್ಪ ಕೂಡ ಕಷ್ಟ ಅನುಭವಿಸಿದ್ದರು' ಎಂದಿದ್ದಾರೆ ಪ್ರಿಯಾಂಕಾ. ಆದರೆ, ತನಗೆ ಅಡುಗೆ ಮಾಡಲು ಬರುತ್ತದೆಯೇ? ಎಂಬ ಮಾಹಿತಿಯನ್ನು ಆಕೆ ಹಂಚಿಕೊಂಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು