ಇನ್ವೆಸ್ಟರ್ ಪ್ರಿಯಾಂಕಾ!

7

ಇನ್ವೆಸ್ಟರ್ ಪ್ರಿಯಾಂಕಾ!

Published:
Updated:
Deccan Herald

ರೂಪದರ್ಶಿ, ಗಾಯನ, ನಟನೆ, ನಿರ್ಮಾಣ... ಪ್ರಿಯಾಂಕಾ ಚೋಪ್ರಾ ಅವರ ವ್ಯಕ್ತಿತ್ವಕ್ಕೆ ಹಲವು ಚಾಚುಗಳಿವೆ. ಇದೀಗ ಆ ಪಟ್ಟಿಗೆ ಇನ್ನೊಂದು ಹೊಸ ಸೇರ್ಪಡೆ.

ಅಭಿಮಾನಿಗಳ ನೆಚ್ಚಿನ ಪಿಗ್ಗಿ ಇದೀಗ ವಾಣಿಜ್ಯ ಕ್ಷೇತ್ರಕ್ಕೂ ಲಗ್ಗೆಯಿಡುತ್ತಿದ್ದಾರೆ. ಹೌದು, ಹಾಲ್ಬರ್ಟನ್ ಸ್ಕೂಲ್ ಎಂಬ ಸ್ಟಾರ್ಟ್‌ಅಪ್‌ಗೆ ಪ್ರಿಯಾಂಕಾ ಹಣ ಹೂಡುತ್ತಿದ್ದಾರೆ. ಇದು ಕೋಡಿಂಗ್ ಎಜುಕೇಶನ್ ಕಂಪನಿ. ಬಂಬಲ್ ಎಂಬ ಸೋಷಿಯಲ್ ಮೀಡಿಯಾ ಆ್ಯಪ್‌ಗೂ ಅವರು ಹಣ ಹೂಡಲು ನಿರ್ಧರಿಸಿದ್ದಾರೆ.

‘ನನ್ನ ಬದುಕಿನ ಹೊಸ ಅಧ್ಯಾಯವೊಂದು ಈ ಮೂಲಕ ತೆರೆದುಕೊಳ್ಳುತ್ತಿದೆ. ಬಂಬಲ್ ಮತ್ತು ಹಾಲ್ಬರ್ಟನ್ ಸ್ಕೂಲ್‌ಗೆ ಬಂಡವಾಳು ಹೂಡುವುದಕ್ಕೆ ತುಂಬ ಉತ್ಸುಕಳಾಗಿದ್ದೇನೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗತಾರತಮ್ಯವನ್ನು ಎಣಿಸದೆ ಎಲ್ಲರಿಗೂ ಸಮಾನ ಅವಕಾಶ ಕೊಡುವ ಕಂಪನಿಗೆ ಹಣ ಹೂಡುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಅವರು ಇತ್ತೀಚೆಗೆ ಟ್ವಿಟ್ ಮಾಡಿದ್ದಾರೆ.

ತಂತ್ರಜ್ಞಾನದ ಪಾಠಗಳನ್ನು ಹೊಸ ವಿಧಾನದಲ್ಲಿ ಕಲಿಸುವ ಉದ್ದೇಶವನ್ನು ‘ಹಾಲ್ಬರ್ಟನ್ ಸ್ಕೂಲ್‌’ ಕಂಪನಿ ಹೊಂದಿದೆ. ಸಾಂಪ್ರದಾಯಿಕ ಕಲಿಕಾ ವಿಧಾನವನ್ನು ಬಿಟ್ಟು, ಗುಂಪು ಚರ್ಚೆ, ಪ್ರಾಜೆಕ್ಟ್‌ಗಳ ಮೂಲಕವೇ ಕಲಿಕೆಯ ಹೊಸ ದಾರಿಯನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಇತ್ತೀಚೆಗೆ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾದ ಪ್ರಕಾರ ಈ ಕಂಪನಿಯ ಕಾರ್ಯವೈಖರಿಯ ರೂಪು ರೇಷೆಗಳ ಕುರಿತು ಚರ್ಚಿಸುವ ಸಲುವಾಗಿಯೇ ಪ್ರಿಯಾಂಕಾ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿನ ತಮ್ಮ ಮನೆಗೆ ಹೋಗಿದ್ದರಂತೆ.

ಇದರ ಜತೆಯಲ್ಲಿಯೇ ಬಂಬಲ್ ಎಂಬ ಡೇಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಆ್ಯಪ್‌ಗೂ ಈ ಕೃಷ್ಣಸುಂದರಿ ಹಣ ಹೂಡುತ್ತಿದ್ದಾರೆ. ಈ ಆ್ಯಪ್‌ ಅನ್ನು ವೈಟ್ನಿ ವೂಲ್ಫ್‌ಹರ್ಡ್‌ ರೂಪಿಸಿದ್ದಾರೆ. ಈ ಆ್ಯಪ್‌ ಅನ್ನು ಭಾರತದ ಮಾರುಕಟ್ಟೆಗೂ ಪರಿಚಯಿಸುವುದು ಪ್ರಿಯಾಂಕಾ ಉದ್ದೇಶ.

ಬ್ಯುಸಿನೆಸ್ ಹೊರತಾಗಿ ಚಿತ್ರರಂಗದಲ್ಲಿಯೂ ಪ್ರಿಯಾಂಕಾ ಹೊಸ ಚಿತ್ರದ ಕೆಲಸ ನಡೆಯುತ್ತಿದೆ. ಅವರ ಹೊಸ ಚಿತ್ರದ ಹೆಸರು ‘ದಿ ಸ್ಕೈ ಈಸ್ ಪಿಂಕ್’. ಸೋನಾಲಿ ಬೋಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೋಟಿವೇಶನಲ್ ಸ್ಪೀಕರ್ ಆಶಾ ಚೌಧರಿ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಪರ್‍ಹಾನ್ ಅಖ್ತರ್ ಮತ್ತು ಜಹೀರಾ ವಸೀಮ್ ಕೂಡ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !