ಭಾನುವಾರ, ಜನವರಿ 24, 2021
24 °C

17ನೇ ವಯಸ್ಸಿನಲ್ಲಿ ಹೀಗಿದ್ದರು ಪ್ರಿಯಾಂಕ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಪ್ರಿಯಾಂಕ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು 17 ವರ್ಷದವಳಿದ್ದಾಗಿನ ಫೋಟೊ ಕೂಡ ಇತ್ತು. ಆ ಫೋಟೊದಲ್ಲಿ ಪಿಗ್ಗಿ ಸಂಪೂರ್ಣ ಭಿನ್ನವಾಗಿದ್ದು ಗುರುತೇ ಸಿಗದಂತೆ ಇದ್ದಾರೆ. ಚಿನ್ನದ ಬಣ್ಣದ ಕ್ರಾಪ್ ಟಾಪ್‌ ಮೇಲೆ ಕಪ್ಪು ಬಣ್ಣದ ಜೀನ್ಸ್ ಜಾಕೆಟ್ ಧರಿಸಿದ್ದ ಪ್ರಿಯಾಂಕ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಫೋಟೊದೊಂದಿಗೆ 17ರಲ್ಲಿ ಹೀಗಿದ್ದೆ, ತೆಳ್ಳಗೆ ಎಂದು ಬರೆದುಕೊಂಡಿದ್ದರು.

ಅವರು ಹಂಚಿಕೊಂಡ ಈ ಫೋಟೊ ಈಗ ತುಂಬಾನೇ ವೈರಲ್ ಆಗಿದೆ. ಅಲ್ಲದೇ ಅಭಿಮಾನಿಗಳು ಇದನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಲಾರಾ ದತ್ತ, ದಿಯಾ ಮಿರ್ಜಾ, ಹೃತಿಕ್ ರೋಶನ್‌, ರಾಜ್‌ಕುಮಾರ್ ರಾವ್‌, ಕತ್ರಿನಾ ಕೈಫ್‌, ಸೋನಾಲಿ ಬೇಂದ್ರೆ ಮುಂತಾದವರು ಫೋಟೊಗೆ ಕಾಮೆಂಟ್ ಮಾಡಿದ್ದರು.

ಪ್ರಿಯಾಂಕ ಚೋಪ್ರಾ ನಟನೆಯ ದಿ ವೈಟ್ ಟೈಗರ್ ಜನವರಿ 22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅವರ ಟೆಕ್ಸ್ಟ್ ಫಾರ್‌ ಯು ಹಾಲಿವುಡ್ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು