7

ಪ್ರಿಯಾಂಕಾ ಆಕರ್ಷಕ ಏಷ್ಯನ್‌ ಮಹಿಳೆ

Published:
Updated:

ಪ್ರತಿಷ್ಠಿತ ಮ್ಯಾಕ್ಸಿಂ ನಿಯತಕಾಲಿಕೆಯ ಮುಖಪುಟದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮಿಂಚುತ್ತಿದ್ದು, 4ನೇ ಬಾರಿ ‘ಮ್ಯಾಕ್ಸಿಂ ಅತ್ಯಂತ ಮಾದಕ ಹಾಗೂ ಆಕರ್ಷಕ ಏಷ್ಯನ್‌ (ಸೆಕ್ಸಿಯೆಸ್ಟ್‌ ಏಷ್ಯನ್‌) ಮಹಿಳೆ’ ಎಂಬ ಪಟ್ಟವನ್ನು ಅವರು ಪಡೆದುಕೊಂಡಿದ್ದಾರೆ. 

ಪ್ರಿಯಾಂಕಾ ವಿಶ್ವದ ಅತೀ ಜನಪ್ರಿಯ ನಟಿಯರಲ್ಲಿ ಒಬ್ಬರು. ಈ ಬಾರಿಯೂ ಏಷ್ಯಾದ 100 ಆಕರ್ಷಕ ಮಹಿಳೆಯರ ಸಾಲಿನಲ್ಲಿ ಮೊದಲ ಸ್ಥಾನವನ್ನು ಇವರು ಪಡೆದುಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಎಲ್ಲಾ ವಿಭಾಗಗಳಲ್ಲೂ ಪ್ರಿಯಾಂಕಾ ಅತೀ ಹೆಚ್ಚು ಅಂಕ ಗಳಿಸಿದ್ದರು. 

ಮ್ಯಾಕ್ಸಿಂ ನಿಯತಕಾಲಿಕೆಯ ಮುಖಪುಟದಲ್ಲಿ ಶ್ವೇತ ಬಣ್ಣದ ಪಾರದರ್ಶಕ ಉಡುಪಿನಲ್ಲಿ ಪ್ರಿಯಾಂಕಾ ಭಂಗಿ ಆಕರ್ಷಕವಾಗಿದೆ. ಬಿಳಿ ಜಾಕೆಟ್‌, ಬಿಳಿ ಪ್ಯಾಂಟ್‌ ತೊಟ್ಟಿರುವ ಪ್ರಿಯಾಂಕಾಳ ಸೌಂದರ್ಯವನ್ನು ನ್ಯೂಡ್‌ ಮೇಕಪ್‌, ಸ್ಮೋಕಿ ಕಣ್ಣುಗಳು ಹಾಗೂ ಮೆಸ್ಸಿ ಹೇರ್‌ಸ್ಟೈಲ್‌ ಮತ್ತಷ್ಟು ಹೆಚ್ಚಿಸಿದೆ. 

ಈ ಹಿಂದೆ 2011, 2013 ಹಾಗೂ 2016ರಲ್ಲಿ ಪ್ರಿಯಾಂಕಾಳೇ ಆಕರ್ಷಕ ಏಷ್ಯನ್‌ (ಸೆಕ್ಸಿಯೆಸ್ಟ್‌ ಏಷ್ಯನ್‌) ಮಹಿಳೆ  ಪ್ರಶಸ್ತಿ ಗೆದ್ದಿದ್ದರು. ಕಳೆದ ವರ್ಷ ಫೋಟೊದಲ್ಲಿ ಪ್ರಿಯಾಂಕಾಳ ಕೈಯನ್ನು ಫೋಟೊಶಾಫ್‌ ಮೂಲಕ ಎಡಿಟ್‌ ಮಾಡಲಾಗಿದೆ ಎಂದು ವಿವಾದ ಸೃಷ್ಟಿಸಿತ್ತು. 

ಸದ್ಯ ಹಾಲಿವುಡ್‌ನಲ್ಲಿ ಕ್ವಾಂಟಿಕೋ ಸರಣಿಯಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಆಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದ ಭಾರತ್‌ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ನಟಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !