ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸೆಪ್ಟೆಂಬರ್ 21’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಉಪೇಂದ್ರ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಸಾಥ್ ನೀಡಿದರು. ಕರೇನ್ ಕ್ರಿಸ್ಟಿ ಸುವರ್ಣ ನಿರ್ದೇಶಿಸಿರುವ ಚಿತ್ರ ಮೇ 22ರಂದು ತೆರೆಗೆ ಬರಲಿದೆ.

‘ವಿಶೇಷವಾದ ಸಿನಿಮಾವಿದು. ಕ್ರಿಸ್ಟಿ ಚೊಚ್ಚಲ ನಿರ್ದೇಶನದ ಸಿನಿಮಾವೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಮ್ಮ ಮನೆಯಲ್ಲಿ ಪ್ರಿಯಾಂಕಾ ಪ್ಯಾನ್ ಇಂಡಿಯಾ ನಟಿ. ಅವರು ಒಂದಾದ ನಂತರ ಮತ್ತೊಂದು ಭಾಷೆಯಲ್ಲಿ ನಟಿಸುತ್ತಲೇ ಇರುತ್ತಾರೆ. ಇಡೀ ತಂಡಕ್ಕೆ ತುಂಬ ಒಳಿತಗಾಲಿ. ನಾನಿನ್ನು ಸಿನಿಮಾ ನೋಡಿಲ್ಲ. ಆದರೆ ನೋಡಿದವರೆಲ್ಲ ಚಿತ್ರ ತುಂಬ ಅದ್ಭುತ ಎನ್ನುತ್ತಿದ್ದಾರೆ. ಕಮರ್ಷಿಯಲ್ ಅಂಶಗಳ ಜತೆಗೆ ಕಂಟೆಂಟ್ ಹೊಂದಿರುವ ಅಂತರರಾಷ್ಟ್ರೀಯ ಶೈಲಿಯ ಸಿನಿಮಾವಿದು’ ಎಂದರು ಉಪೇಂದ್ರ.

‘ನಿರ್ದೇಶಕಿ ಜೂಮ್ ಕಾಲ್ನಲ್ಲಿ ಈ ಕಥೆಯನ್ನು ಹೇಳಿದರು. ಒಂದು ಗಂಟೆ ಅಲುಗಾಡದೆ ಕಥೆ ಕೇಳಿದೆ. ಈ ಪಾತ್ರಕ್ಕೆ ನನ್ನನ್ನು ಏಕೆ ಆಯ್ಕೆ ಮಾಡುತ್ತಿದ್ದಾರೆ ಎಂಬ ಅನುಮಾನವಿತ್ತು. ಆಗ ನಿರ್ದೇಶಕಿ ಈ ಪಾತ್ರಕ್ಕೆ ನಿಮ್ಮ ಗ್ರೇಸ್ ಬೇಕು ಎಂದರು. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೇನೆ. 25 ವರ್ಷಗಳಲ್ಲಿ 50 ಸಿನಿಮಾಗಳಾಗಿವೆ. ಈಗಲೂ ಕಲಿಕೆ ನಿರಂತರ. ಯುವ ನಿರ್ದೇಶಕರು ಇಂಥ ಅವಕಾಶ ಕೊಟ್ಟಾಗ ಖುಷಿಯಾಗುತ್ತದೆ. ಕ್ರಿಸ್ಟಿ ಅವರ ಆಲೋಚನೆ ವಿಭಿನ್ನವಾಗಿದೆ’ ಎಂದರು ಪ್ರಿಯಾಂಕಾ.

‘22 ವರ್ಷದ ಹುಡುಗಿ ನಿರ್ದೇಶಕಿ ಎಂದು ನೋಡದೇ ಪ್ರಿಯಾಂಕಾ ಪ್ರೋತ್ಸಾಹ ನೀಡಿದ್ದಾರೆ. ನೈಜ ಕಥೆ ಆಧಾರಿತ ಸಿನಿಮಾವಿದು. ಆಲ್ಝೈಮರ್ ಖಾಯಿಲೆ ಹೊಂದಿರುವವರ ಕುರಿತು ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಈ ಸಿನಿಮಾದಲ್ಲಿ ನಾವು ಅವರಿಗೆ ಆರೈಕೆ ಮಾಡುವ ವ್ಯಕ್ತಿಗಳ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇವೆ’ ಎಂದರು ನಿರ್ದೇಶಕಿ.

‘ಈ ಸಿನಿಮಾ ಮುಹೂರ್ತಕ್ಕೆ ಬಂದಿದ್ದೆ. ಈ ನಿರ್ದೇಶಕಿ ಏನೋ ವಿಭಿನ್ನವಾಗಿ ಮಾಡುತ್ತಾರೆ ಎಂದು ಆವತ್ತೇ ಅನ್ನಿಸಿತ್ತು. ಇವತ್ತು ಸಿನಿಮಾ ಕಾನ್ ಚಿತ್ರೋತ್ಸವಕ್ಕೆ ಹೊರಟು ನಿಂತಿದೆ. ಪ್ರಿಯಾಂಕಾ ಅವರು ಗ್ಲಾಮರ್ ಬಿಟ್ಟು ಒಂದು ಕಷ್ಟದ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಮನೆ ಕೆಲಸ ಮಾಡಿಕೊಂಡು, ರೋಗಿಯನ್ನು ಆರೈಕೆ ಮಾಡುವ ಪಾತ್ರ ಅವರದ್ದು. ಆಲ್ಝೈಮರ್ ಖಾಯಿಲೆ ಹೊಂದಿರುವ ವ್ಯಕ್ತಿಯಾಗಿ ಪ್ರವೀಣ್ ಸಿಸೋಡಿಯ ಗಮನ ಸೆಳೆಯುತ್ತಾರೆ. ಚಿತ್ರವನ್ನು ಈಗಾಗಲೇ ನೋಡಿರುವೆ. ತುಂಬ ಸೂಕ್ಷ್ಮ ಕಥಾವಸ್ತುವಿನ ಸಿನಿಮಾ’ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

ಮುಖ್ಯ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯ, ಝರಿನ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ, ಸಚಿನ್ ಪಾಟೆಕರ್ ನಟಿಸಿದ್ದಾರೆ. ರಾಜಶೇಖರ್ ಕಥೆ, ವಿನಯ್ ಚಂದ್ರ ಸಂಗೀತವಿದ್ದು, ಅನಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-1714267325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.