ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಆರಾಧ್ಯ ದೈವ, ಕೋಟ್ಯಂತರ ಜನರ ಸ್ಫೂರ್ತಿಯಾಗಿದ್ದ ಪುನೀತ್ ರಾಜ್ಕುಮಾರ್ ಅವರು ನಟನೆ, ಗಾಯನ, ನೃತ್ಯ, ನಿರ್ಮಾಣ ಹಾಗೂ ನಿರೂಪಣೆ ಹೀಗೆ ಎಲ್ಲ ರಂಗಗಳಲ್ಲೂ ಗಮನ ಸೆಳೆದಿದ್ದ ಅವರ ಸಾಧನೆಯ ಹಾದಿ ಅವಿಸ್ಮರಣೀಯ.

1975ರ ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದ ಪುನೀತ್. ಇವರಿಗೆ ಮೊದಲು ‘ಲೋಹಿತ್’ ಎಂದು ಹೆಸರಿಡಲಾಗಿತ್ತು. ಬಳಿಕ ಪುನೀತ್ ರಾಜಕುಮಾರ್ ಎಂದು ಹೆಸರು ಬದಲಾಯಿಸಲಾಯಿತು.
.ಅಭಿಮಾನಿಗಳ ಜತೆ ಅಪ್ಪು ಜನ್ಮದಿನ ಆಚರಣೆ ವಿನಮ್ರತೆಯ ಸಂಗತಿ: ಅಶ್ವಿನಿ ಪುನೀತ್.
ತಂದೆ ಡಾ. ರಾಜ್ಕುಮಾರ್ ಜೊತೆಗೆ ‘ಮಾಸ್ಟರ್ ಲೋಹಿತ್’ ಆಗಿ 'ಬೆಟ್ಟದ ಹೂವು' ‘ಸನಾದಿ ಅಪ್ಪಣ್ಣ‘, ‘ತಾಯಿಗೆ ತಕ್ಕ ಮಗ‘, ‘ವಸಂತ ಗೀತಾ‘, ‘ಹೊಸ ಬೆಳಕು‘, ‘ಚಲಿಸುವ ಮೋಡಗಳು‘, ‘ಭಾಗ್ಯವಂತ‘, ‘ಭಕ್ತ ಪ್ರಹ್ಲಾದ‘, ‘ಎರಡು ನಕ್ಷತ್ರಗಳು‘ ‘ಯಾರಿವನು’ ಸೇರಿ ಅನೇಕ ಚಿತ್ರಗಳಲ್ಲಿ ನಟನೆ ಮಾತ್ರವಲ್ಲದೆ, ತಮ್ಮ ಬಾಲ್ಯದಲ್ಲಿ ‘ಬಾನ ದಾರಿಯಲ್ಲಿ ಸೂರ್ಯ', `ಕಾಣದಂತೆ ಮಾಯವಾದನೋ', `ಕಣ್ಣಿಗೆ ಕಾಣುವ ದೇವರು’ ಹಾಡಿಗೆ ಧ್ವನಿ ನೀಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರು 2002ರಲ್ಲಿ ತೆರೆಕಂಡ ‘ಅಪ್ಪು’ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ‘ಅಭಿ’, ‘ವೀರ ಕನ್ನಡಿಗ’, ‘ಮೌರ್ಯ’, ‘ಆಕಾಶ್’ ‘ನಮ್ಮ ಬಸವ’, ‘ಅಜಯ್’ ಈ ಚಿತ್ರಗಳಲ್ಲಿ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುತ್ತಾರೆ.

‘ಮಿಲನ’, ‘ಅರಸು’, ‘ಜಾಕಿ’, ‘ಹುಡುಗರು’, ‘ಪವರ್’ ‘ರಣ ವಿಕ್ರಮ’, ‘ರಾಜಕುಮಾರ’, ‘ನಟಸಾರ್ವಭೌಮ’ ,’ಯುವರತ್ನ’ ಚಿತ್ರದ ಕನ್ನಡದ ಮನೆಮತಾದರು. ‘ಜೇಮ್ಸ್’ ಚಿತ್ರದಲ್ಲಿ ಕೊನೆಯದಾಗಿ ನಾಯಕನಾಗಿ ಕಾಣಿಸಿಕೊಂಡಿದ್ದರು.

ಅಪ್ಪು ಅವರು ಗಾಯಕರಾಗಿ, ಜೊತೆ ಜೊತೆಯಲಿ, ಅಭಿಮಾನಿಗಳೇ ನಮ್ಮನೆ ದೇವ್ರು, ಎಡವಟ್ ಆಯ್ತು ತಲೆ ಕಟ್ ಹೋಯ್ತು, ತಾಲಿಬಾನ್ ಅಲ್ಲ ಅಲ್ಲ, ಹೊಸ ಗಾನ ಬಜಾನಾ, ರುಕ್ಕು ರುಕ್ಕು ರುಕ್ಕಮ್ಮ ಸೇರಿದಂತೆ ಅನೇಕ ಹಾಡುಗಳಿಗೆ ಧನಿಯಾಗಿದ್ದಾರೆ.

ಪುನೀತ್ ರಾಜ್ಕುಮಾರ್ ನಿರ್ಮಾಪಕರಾಗಿ `ಕವಲುದಾರಿ', `ಮಾಯಾಬಜಾರ್' ಸೇರಿದಂತೆ ಕೆಲವು ಚಿತ್ರಗಳನ್ನು ತಮ್ಮ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರ ಕನಸಿನ ಯೋಜನೆಯಾಗಿದ್ದ 'ಗಂಧದಗುಡಿ' ವಿಶೇಷ ಸಾಕ್ಷ್ಯಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಇದಲ್ಲದೆ 'ಕನ್ನಡದ ಕೋಟ್ಯಧಿಪತಿ', 'ಫ್ಯಾಮಿಲಿ ಪವರ್' ಕಾರ್ಯಕ್ರಮಗಳ ನಿರೂಪಣೆ ಮೂಲಕ ಗಮನ ಸೆಳೆದಿದ್ದರು.

ಪುನೀತ್ ರಾಜಕುಮಾರ್ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಸಮಾಜಮುಖಿ ಕಳಕಳಿಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ 2022ರ ಮಾರ್ಚ್ ತಿಂಗಳಿನಲ್ಲಿ ಮರಣೋತ್ತರ `ಡಾಕ್ಟರೇಟ್' ನೀಡಿ ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.