ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಗಿ ಬಂದರು ಪುನೀತ್‌ ರಾಜ್‌ಕುಮಾರ್‌: ಲಕ್ಕಿಮ್ಯಾನ್‌ ಟೀಸರ್‌ ಬಿಡುಗಡೆ

Last Updated 25 ಜುಲೈ 2022, 9:43 IST
ಅಕ್ಷರ ಗಾತ್ರ

ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌, ಶೀಘ್ರದಲ್ಲೇ ದೇವರಾಗಿ ತೆರೆ ಮೇಲೆ ಬರಲಿದ್ದಾರೆ. ಪುನೀತ್‌ ಅವರ ಅಭಿನಯದ ಕೊನೆಯ ಸಿನಿಮಾ ‘ಲಕ್ಕಿಮ್ಯಾನ್‌’ ಟೀಸರ್ ಸೋಮವಾರ(ಜುಲೈ 25) ಬಿಡುಗಡೆಯಾಗಿದ್ದು, ನೆಚ್ಚಿನ ‘ಅಪ್ಪು’ವನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ತಮಿಳಿನ ‘ಓ ಮೈ ಕಡವುಳೆ’ ಸಿನಿಮಾ ಕಥೆಯ ಎಳೆಯನ್ನಿಟ್ಟುಕೊಂಡು, ಪ್ರಭುದೇವ ಸಹೋದರ ಎಸ್‌.ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇಲ್ಲಿ ದೇವರ ಪಾತ್ರದಲ್ಲಿ ಪುನೀತ್‌ ಕಾಣಿಸಿಕೊಂಡಿದ್ದಾರೆ. ‘ಲಕ್ಕಿಮ್ಯಾನ್‌’ ಟೀಸರ್‌ ನೋಡಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೂ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಬಹುಭಾಷಾ ನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಪುನೀತ್‌ ಹಾಗೂ ಪ್ರಭುದೇವ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಡ್ಯಾನ್ಸ್‌ನ ಝಲಕ್‌ ಟೀಸರ್‌ನಲ್ಲಿದ್ದು, ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ. ಟೀಸರ್‌ನಲ್ಲೂ ‘God is arriving soon’ ಎಂದಷ್ಟೇ ಚಿತ್ರತಂಡ ಘೋಷಿಸಿದೆ. ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಬಣ್ಣಹಚ್ಚಿದ್ದಾರೆ. ಚಿತ್ರವು ಫ್ಯಾಂಟಸಿ ಡ್ರಾಮಾ ಕಥಾಹಂದರವನ್ನು ಹೊಂದಿದ್ದು, ಪಿ.ಆರ್. ಮೀನಾಕ್ಷಿ ಸುಂದರಂ ಹಾಗೂ ಪಿ.ಕಾಮರಾಜ್ ಇದನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT