ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪುನೀತ್‌ ರಾಜ್‌ಕುಮಾರ್ ಕಾಫಿನಾಡಿನ ಅಳಿಯ

Last Updated 29 ಅಕ್ಟೋಬರ್ 2021, 11:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಕಾಫಿನಾಡಿನ ಅಳಿಯ, ಅವರ ಪತ್ನಿ ಅಶ್ವಿನಿ ಅವರು ಈ ಜಿಲ್ಲೆಯ ಭಾಗಮನೆ ಗ್ರಾಮದವರು. ಕಾಫಿನಾಡಿಗೂ ಪುನೀತ್‌ ಅವರಿಗೂ ಅವಿನಾಭಾವ ನಂಟು ಇತ್ತು.

ಅಶ್ವಿನಿ ಅವರ ತಂದೆ ರೇವನಾಥ್‌ ಮತ್ತು ತಾಯಿ ವಿಜಯಾ. ಮೂಲತಃ ಚಿಕ್ಕಮಗಳೂರಿನ ಭಾಗಮನೆ ಗ್ರಾಮದ ಈ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.

ವರ್ಷಕ್ಕೊಮ್ಮೆ ಸ್ವಗ್ರಾಮಕ್ಕೆ ಭೇಟಿ ನೀಡುತ್ತಾರೆ.
ಪುನೀತ್‌ ಅವರು ಕಾಫಿನಾಡಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ‘ಮಿಲನ’, ಬಾಲನಟನಾಗಿದ್ದಾಗ ಅಭಿನಯಿಸಿದ್ದ ‘ಬೆಟ್ಟದ ಹೂವು’ ಸಹಿತ ಹಲವಾರು ಸಿನಿಮಾಗಳ ಚಿತ್ರೀಕರಣಗಳು ಇಲ್ಲಿ ನಡೆದಿದ್ದವು.

‘ಪುನೀತ್‌ ಮತ್ತು ಅಶ್ವಿನಿ ಬಾಲ್ಯಸ್ನೇಹಿತರು. ಅವರದು ‘ಲವ್‌ ಕಂ ಅರೆಂಜ್‌’ ಮದುವೆ. ಅದ್ಧೂರಿಯಾಗಿ ವಿವಾಹ ನೆರವೇರಿತ್ತು’ ಎಂದು ಕುಟುಂಬದ ಒಡನಾಡಿ ಉಮಾ ಐ.ಬಿ.ಶಂಕರ್‌ ನೆನಪಿಸಿಕೊಂಡರು.

‘ಅಶ್ವಿನಿ ತಂದೆ ರೇವನಾಥ್‌ ನಿವೃತ್ತ ಎಂಜಿನಿಯರ್‌, ತಾಯಿ ವಿಜಯಾ ಅವರು ನಿವೃತ್ತ ಪ್ರೊಫೆಸರ್‌. 50 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಶ್ವಿನಿ ಅವರು ಈ ದಂಪತಿಯ ಹಿರಿಯ ಪುತ್ರಿ. ಡಿಂಪಲ್‌ ಎರಡನೇಯವರು, ವಿನಯ್‌ ಮೂರನೇಯವರು’ ಎಂದರು.
‘ಚಿಕ್ಕಮಗಳೂರು ಎಂದರೆ ಪುನೀತ್‌ಗೆ ಅಚ್ಚುಮೆಚ್ಚು. ಅವರು ನಿಸರ್ಗ ಪ್ರಿಯರಾಗಿದ್ದರು. ಮುತ್ತೋಡಿ ಅರಣ್ಯ ಪ್ರದೇಶ, ಗಿರಿ ಶ್ರೇಣಿ ಸಹಿತ ವಿವಿಧ ತಾಣಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT