ಗುರುವಾರ , ಜನವರಿ 27, 2022
21 °C

SONG | ಅಪ್ಪು ಕೊನೆಯ ಹಾಡು: 'ಹರೀಶ ವಯಸ್ಸು 36' ಚಿತ್ರದ ಹಾಡಿಗೆ ದನಿಯಾದ ಪುನೀತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ ಎರಡು ತಿಂಗಳ ಮೇಲಾದರೂ ಅವರ ನೆನಪು ಚಂದನವನದಲ್ಲಿ ಸದಾ ಹಸಿರಾಗಿದೆ.  

ಅಭಿಮಾನಿಗಳಿಗೆ ಗೌರವ, ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅಪ್ಪು ಹೊಸಬರ ಸಿನಿಮಾಗಾಗಿ ಒಂದು ಗೀತೆ ಹಾಡಿದ್ದರು. ಇದೀಗ ಆ ಚಿತ್ರತಂಡ ಹಾಡನ್ನು ಬಿಡುಗಡೆ ಮಾಡಿದೆ.

ಕರಾವಳಿಯ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ 'ಹರೀಶ ವಯಸ್ಸು 36' ಚಿತ್ರದ ಟೈಟಲ್‌ ಸಾಂಗಿಗೆ ಅಪ್ಪು ಹಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೂರು ದಿನಗಳ ಹಿಂದೆ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ ಈ ಹಾಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾಗೇ ಅಪ್ಪು ಅಭಿಮಾನಿಗಳು ಸಹ ಈ ಹಾಡನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಸಂಗೀತ ನಿರ್ದೇಶಕ ಗುರುರಾಜ್ ಜ್ಯೇಷ್ಠ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಡು ಇದಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು