ಬುಧವಾರ, ಆಗಸ್ಟ್ 21, 2019
25 °C

ಪುರಿ ಸಿನಿಮಾದಲ್ಲಿ ವಿಜಯ್‌ ನಾಯಕ

Published:
Updated:
Prajavani

ಪುರಿ ಜಗನ್ನಾಥ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್‌ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ‘ಈದ್‌ಗೆ ಸಿಕ್ಕ ಉಡುಗೊರೆ ಎಂದೇ ಹೇಳಬಹುದು. ವಿಜಯ್‌ ದೇವರಕೊಂಡ ಜೊತೆ ಸಿನಿಮಾ ಮಾಡಲಿದ್ದೇನೆ. ಈದ್‌ ಮುಬಾರಕ್‌’ ಎಂದು ಬರೆದಿದ್ದಾರೆ.

ಒಂದು ವಾರದ ಹಿಂದೆ ವಿಜಯ್‌ ಹಾಗೂ ಪುರಿ ಭೇಟಿ ಮಾಡಿದ್ದರು. ಸಿನಿಮಾ ಕುರಿತು ಎರಡು ತಾಸು ಚರ್ಚೆ ನಡೆಸಿ ತೀರ್ಮಾನ ಮಾಡಿದ್ದರು. ಈಗ ಈ ವಿಷಯವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಇದೊಂದು ಆ್ಯಕ್ಷನ್‌ ಸಿನಿಮಾ ಆಗಿದ್ದರೂ, ಸ್ಕ್ರಿಪ್ಟ್‌ನಲ್ಲಿ ಭಾವನಾತ್ಮಕತೆಗೆ ಹೆಚ್ಚು ಒತ್ತು ಕೊಡಲಾಗಿದೆಯಂತೆ. ನಾಯಕಿಯ ಪಾತ್ರಕ್ಕೆ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲ. ಸದ್ಯದಲ್ಲಿಯೇ ಇದು ಅಂತಿಮಗೊಳ್ಳಲಿದೆ ಎಂದು ಸಿನಿ ತಂಡ ಹೇಳಿದೆ.

‘ಪುರಿ ಹಾಗೂ ವಿಜಯ್‌ ಜೋಡಿ ‘ರೆಡ್‌ ಹಾಟ್‌’ ಸೃಷ್ಟಿಸಲಿದೆ ಎಂದು ರಾಮ್‌ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸದ್ಯ ವಿಜಯ್‌ ದೇವರಕೊಂಡ, ಕ್ರಾಂತಿ ಮಾಧವ್‌ ಅವರ ನಿರ್ದೇಶನದ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ರಾಶಿ ಖನ್ನಾ, ಐಶ್ವರ್ಯಾ ರಾಜೇಶ್‌ ಕೂಡ ಈ ಸಿನಿಮಾದಲ್ಲಿದ್ದಾರೆ.

Post Comments (+)