ಪುಟ್ಟರಾಜು ಲವ್‌ ಸಕ್ಸೆಸ್‌!

7

ಪುಟ್ಟರಾಜು ಲವ್‌ ಸಕ್ಸೆಸ್‌!

Published:
Updated:
Deccan Herald

‘ನಮಗೆ ಸಾಕಷ್ಟು ಥಿಯೇಟರ್‌ಗಳು ಸಿಕ್ಕಿವೆ. ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯವೂ ಸಿಗ್ತಿದೆ. ಚಿತ್ರ ಯಶಸ್ವಿಯಾಗಿದೆ’ ಹೀಗೆ ಮೂರೇ ವಾಕ್ಯದಲ್ಲಿ ಗೆಲುವನ್ನು ಘೊಷಿಸಿಕೊಂಡರು ‘ಪುಟ್ಟರಾಜು... ಲವರ್ಸ್‌ ಆಫ್‌ ಶಶಿಕಲಾ’ ಚಿತ್ರದ ನಿರ್ಮಾಪಕ ನಾಗರಾಜ್‌ ಎಚ್‌. ಈ ಚಿತ್ರ ಕಳೆದ ವಾರ (ಆಗಸ್ಟ್‌ 10) ಬಿಡುಗಡೆಯಾಗಿದೆ. ಸಿನಿಮಾದ ಯಶಸ್ಸನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದುಕೊಳ್ಳುವಷ್ಟರಲ್ಲಿ ವಿತರಕ ವಿಜಯ್‌ ಮೈಕ್‌ ಕೈಗೆತ್ತಿಕೊಂಡು ‘ಇದು ಸಕ್ಸೆಸ್‌ ಮೀಟ್‌ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆದರೆ ವಾತಾವರಣದ ಕಾರಣದಿಂದಲೋ ಏನೋ ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ನಮಗೆ ಪತ್ರಿಕೆಯವರ ಬೆಂಬಲ ಬೇಕು’ ಎಂದು ಅವರು ಅಸಲಿ ವಿಷಯವನ್ನು ಹಂಚಿಕೊಂಡರು. 

‘ಏಕಪರದೆಯ ಚಿತ್ರಮಂದಿರಗಳಲ್ಲಿ ಪುಟ್ಟರಾಜುವಿಗೆ ಒಳ್ಳೆಯ ಸ್ಪಂದನವೇ ಸಿಗುತ್ತಿದೆ. ಆದರೆ ನಗರದ ಮಲ್ಟಿಪ್ಲೆಕ್ಸ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಸಾಕಷ್ಟು ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಇದೆ. ಅದನ್ನೇ ಮುಂದಿನವಾರವೂ ಉಳಿಸಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದ್ದೇವೆ’ ಎಂದರು ವಿಜಯ್‌. 28 ಮಲ್ಟಿಪ್ಲೆಕ್ಸ್‌ ಸೇರಿದಂತೆ 75 ಚಿತ್ರಮಂದಿರಗಳಲ್ಲಿ ಪುಟ್ಟರಾಜು ಪ್ರದರ್ಶನವಾಗುತ್ತಿದೆಯಂತೆ.

‘ಸಿನಿಮಾ ನೋಡಿದ ಎಲ್ಲರೂ ಸಕಾರಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಯುವ ಸಮೂಹಕ್ಕೆ ಈ ಚಿತ್ರ ಇಷ್ಟವಾಗಿದೆ. ಸರ್ಕಾರದ ಆದೇಶವಿದ್ದ ಕಾರಣ ಸಿನಿಮಾ ಪೋಸ್ಟರ್‌ಗಳನ್ನು ಅಂಟಿಸುವಂತಿರಲಿಲ್ಲ. ಮಳೆಯೂ ಜೋರಾಗಿತ್ತು. ಈ ಅಡೆತಡೆಗಳ ನಡುವೆಯೂ ನಮ್ಮ ಚಿತ್ರವನ್ನು ಇಷ್ಟು ಜನ ನೋಡುತ್ತಿರುವುದು ಆಶಾದಾಯಕ ಬೆಳವಣಿಕೆ. ಈ ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಹಿಡಿದು ನಿಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು ನಿರ್ದೇಶಕ ಸಹದೇವ್‌.

 ಮತ್ತೆ ಸಂಗೀತ ನಿರ್ದೇಶಕರು, ಕಲಾವಿದರ ಕೈಗೆ ಬರುತ್ತಿದ್ದಂತೆಯೇ ಸಿನಿಮಾದ ಗುಣಗಾನ ಆರಂಭವಾಯಿತು. ಡಿಂಗ್ರಿ ನರೇಶ್‌, ಸುಶ್ಮಿತಾ, ಜಯಶ್ರೀ ಆರಾಧ್ಯ, ಅಮಿತ್‌ ಎಲ್ಲರೂ ಚಿತ್ರಕ್ಕೆ ಜನರಿಂದ ಸಿಕ್ಕಿರುವ ಪ್ರತಿಸ್ಪಂದನಕ್ಕೆ ಸಂತಸ ವ್ಯಕ್ತಪಡಿಸಲಿಕ್ಕೇ ಮಾತನ್ನು ಮಿಸಲಿಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !