ಸಿನಿಮಾ ರೇಸ್‌ನಲ್ಲಿ ‘ರೇಸ್‌’ ಗೆಲ್ಲುತ್ತಾ?!

ಬುಧವಾರ, ಮೇ 22, 2019
32 °C

ಸಿನಿಮಾ ರೇಸ್‌ನಲ್ಲಿ ‘ರೇಸ್‌’ ಗೆಲ್ಲುತ್ತಾ?!

Published:
Updated:
Prajavani

ಸಿನಿಮಾ ಎಂದರೆ ರೇಸ್‌. ಪ್ರತಿ ವಾರ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಅವೆಲ್ಲವೂ ಒಂದರ ಜೊತೆ ಇನ್ನೊಂದು ಎಂಬಂತೆ ರೇಸ್‌ ನಡೆಸಬೇಕು... ನಟರಾದ ದಿವಾಕರ್‌, ಸಂತೋಷ್ ಮತ್ತು ನಕುಲ್ ಗೋವಿಂದ್ ಅವರು ತಮ್ಮ ಕನಸುಗಳ ಜೊತೆ ರೇಸ್‌ ನಡೆಸಿ, ಹೊಸ ಸಿನಿಮಾ ಸಿದ್ಧಪಡಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ ‘ರೇಸ್‌’.

ಚಿತ್ರದ ಹಾಡುಗಳನ್ನು ತೋರಿಸಿ, ಚಿತ್ರದ ಬಗ್ಗೆ ಒಂದೆರಡು ಮಾಹಿತಿ ನೀಡಲು ಸಿನಿಮಾ ತಂಡ ಚಿಕ್ಕ ಕಾರ್ಯಕ್ರಮ ಆಯೋಜಿಸಿತ್ತು. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳ ಮಾತುಗಳಲ್ಲಿ ಒಂದಿಷ್ಟು ಹಿನ್ನೋಟದ ಅಂಶಗಳೂ ಇದ್ದವು.

‘ಇದು ನನ್ನ ಹಲವು ವರ್ಷಗಳ ಕನಸು. ನಾನು ಬೆಂಗಳೂರಿಗೆ ಬಂದಿದ್ದೇ ಸಿನಿಮಾ ಹೀರೊ ಆಗಲು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಈಗ ನನಗೊಂದು ಅವಕಾಶ ದೊರೆತಿದೆ’ ಎನ್ನುತ್ತ ಮೊದಲ ಮಾತು ಆರಂಭಿಸಿದರು ನಟ ದಿವಾಕರ್‌.

ಅವರು ಸಿನಿಮಾ ನಾಯಕ ನಟ ಆಗುವ ಅವಕಾಶ ದೊರೆಯದಿದ್ದಾಗ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಅವರದೇ ಮಾತಿನಲ್ಲಿ ಹೇಳುವುದಾದರೆ, ‘ಸೇಲ್ಸ್‌ಮ್ಯಾನ್‌ ಆಗಿ ರಾಜ್ಯದ ಮೂಲೆ ಮೂಲೆ ಸುತ್ತಿದ್ದರು’. ನಂತರ ದಿವಾಕರ್‌ ಅವರಿಗೆ ಬಿಗ್‌ ಬಾಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಆ ಮೂಲಕ ಸಿನಿಮಾ ಲೋಕ ಪ್ರವೇಶಿಸುವ ಕನಸು ಸಾಕಾರವಾಯಿತು.

ಚಿತ್ರದ ಇನ್ನೊಬ್ಬ ಪ್ರಮುಖ ಪಾತ್ರಧಾರಿ ಸಂತೋಷ್. ‘ನಾನು ಯಶಸ್ಸಿನ ಹಿಂದೆ ಓಡುತ್ತಿದ್ದೇನೆ. ಈ ಸಿನಿಮಾ ಮೂಲಕ ಯಶಸ್ಸು ಕಂಡುಕೊಳ್ಳುವ ಭರವಸೆಯಲ್ಲಿ ಇದ್ದೇನೆ. ನಾವೆಷ್ಟು ಸಿನಿಮಾ ಮಾಡಿದ್ದೇವೆ ಎಂಬುದಕ್ಕಿಂತಲೂ, ಯಶಸ್ಸು ಮುಖ್ಯವಾಗುತ್ತದೆ’ ಎಂದರು ಸಂತೋಷ್. ಅವರು ಈ ಚಿತ್ರದಲ್ಲಿ ಹಲವು ಶೇಡ್‌ಗಳಲ್ಲಿ ಕಾಣಿಸುತ್ತಾರಂತೆ. ಹೀಗೆ ಕಾಣಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಆಗಿತ್ತಂತೆ.

ನಕುಲ್ ಗೋವಿಂದ್ ಅವರು ಈ ಚಿತ್ರದಲ್ಲಿ ಒಳ್ಳೆಯ ಪಾತ್ರವೊಂದನ್ನು ನಿಭಾಯಿಸುವ ಅವಕಾಶ ದೊರೆತ ಖುಷಿಯಲ್ಲಿ ಇದ್ದರು. ‘ನಾವು ಹಲವು ಸಿನಿಮಾಗಳನ್ನು ಮಾಡುತ್ತೇವೆ. ಅದರೆ ಒಂದು ಸಿನಿಮಾ ನಮಗೆ ಹೊಸ ಬದುಕು ಕೊಡುತ್ತದೆ’ ಎಂದರು ನಕುಲ್.

ಚಿತ್ರದ ನಾಯಕಿ ರಕ್ಷಾ ಶೆಣೈ. ಅವರು ಹೆಚ್ಚೇನೂ ಮಾತನಾಡಲಿಲ್ಲ. ‘ಸಂತೋಷ, ಒಂಥರಾ ಭಯ, ಉತ್ಸಾಹ ನನ್ನಲ್ಲಿ ತುಂಬಿಕೊಂಡಿವೆ’ ಎಂದರು. ಅವರದು ಇದರಲ್ಲಿ ಅಂಜನಿ ಎನ್ನುವ ಪಾತ್ರ. ಅದು ‘ಒಂದಿಷ್ಟು ನಿಗೂಢವನ್ನೂ ಒಂದಿಷ್ಟು ಬಬ್ಲಿ ಗುಣಗಳನ್ನೂ’ ಹೊತ್ತುಕೊಂಡಿದೆ ಎಂದರು ರಕ್ಷಾ. ಚಿತ್ರದ ನಿರ್ದೇಶನ ಹೇಮಂತ್ ಕೃಷ್ಣ ಅವರದ್ದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !