ಚಂದನವನದ ತಾರೆ, ಗುಳಿಗೆನ್ನೆಯ ಚೆಲುವೆ ರಚಿತಾ ರಾಮ್ ಅವರ ಸಿನಿ ಪಯಣಕ್ಕೆ 14 ವರ್ಷ ಪೂರ್ಣಗೊಂಡಿದೆ. ಇವರ ಯಶಸ್ಸಿನ ಹಾದಿಗೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.

ʼಅರಸಿʼ ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ ಪಡೆದ ರಚಿತ ರಾಮ್, 2013ರಲ್ಲಿ ತೆರೆಕಂಡ ಎಂ.ಡಿ.ಶ್ರೀಧರ್ ನಿರ್ದೇಶನದ ʼಬುಲ್ ಬುಲ್ʼ ಚಿತ್ರದಲ್ಲಿ ದರ್ಶನ್ ಜೊತೆಗೆ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದರು.

ನಂತರ ದಿನಗಳಲ್ಲಿ ಸುದೀಪ್ ನಟನೆಯ ʼರನ್ನʼ, ಡಾಲಿ ಧನಂಜಯ್ ಅವರ ʼಮಾನ್ಸೂನ್ ರಾಗʼ, ರಮೇಶ್ ಜೊತೆಗೆ ʼ100ʼ, ದುನಿಯಾ ವಿಜಯ್ ಅವರ ʼಲ್ಯಾಂಡ್ ಲಾರ್ಡ್ʼ, ನಿಖಿಲ್ ಕುಮಾರಸ್ವಾಮಿ ಜೊತೆ ʼಸೀತಾರಾಮ ಕಲ್ಯಾಣʼ, ಶಿವರಾಜ್ಕುಮಾರ್ ಜೊತೆ ʼಆಯುಷ್ಮಾನ್ ಭವʼ, ಧ್ರುವ ಸರ್ಜಾ ಒಟ್ಟಿಗೆ ʼಭರ್ಜರಿʼ, ಶ್ರೀ ಮುರುಳಿ ಜೊತೆಗೆ ʼರಥಾವರʼ, ಪುನೀತ್ ರಾಜಕುಮಾರ್ ಒಟ್ಟಿಗೆ ʼಚಕ್ರವ್ಯೂಹʼ, ಶ್ರೀನಗರ ಕಿಟ್ಟಿ ಅವರ ʼಸಂಜು ವೆಡ್ಸ್ ಗೀತಾ 2ʼ , ಸತೀಶ್ ನೀನಾಸಂ ಜೊತೆಗೆ ʼಅಯೋಗ್ಯʼ, ಗಣೇಶ್ ಅವರ ʼದಿಲ್ ರಂಗೀಲಾʼ, ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಜೊತೆ ́ಕಲ್ಟ್ʼ ಚಿತ್ರದಲ್ಲಿ ನಟಿಸದ್ದಾರೆ. ಆ ಮೂಲಕ ಅವರು ಕನ್ನಡದ ಮೇರು ನಟರ ಜೊತೆಗೆ ಅಭಿನಯಿಸಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ತೆರೆ ಕಂಡು ಯಶಸ್ಸು ಗಳಿಸಿದ ರಜನಿಕಾಂತ್ ನಟನೆ ʼಕೂಲಿʼ ಚಿತ್ರದ ಖಡಕ್ ಪಾತ್ರ ಒಂದರಲ್ಲಿ ನಟಿಸುವ ಮೂಲಕ ಪರಭಾಷೆಯ ಚಿತ್ರಗಳಲ್ಲೂ ನಟಿಸಿ ಪ್ರೇಕ್ಷಕರನ್ನು ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.