ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌ ಸೆಟ್‌ಗೆ ಮರಳಿದ ಮೀನಾಕ್ಷಿ

Last Updated 25 ಜೂನ್ 2020, 11:52 IST
ಅಕ್ಷರ ಗಾತ್ರ

‘ಸೂಪರ್‌ ಮಚ್ಚಿ’ ಹೆಸರಿನ ಚಿತ್ರದ ಮೂಲಕ ನಟಿ ರಚಿತಾ ರಾಮ್‌ ಟಾಲಿವುಡ್‌ಗೆ ಕಾಲಿಟ್ಟಿದ್ದು ಹಳೆಯ ಸುದ್ದಿ. ಇದರ ಶೂಟಿಂಗ್‌ ಶುರುವಾದ ಬಳಿಕ ಇದಕ್ಕೆ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎಂಬ ಶೀರ್ಷಿಕೆಯನ್ನು ಮರುನಾಮಕರಣ ಮಾಡಲಾಯಿತು. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ಅಂದಹಾಗೆ ನಟ ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಇದರ ನಾಯಕ.

ಈ ಚಿತ್ರದ ಶೂಟಿಂಗ್‌ಗೂ ಲಾಕ್‌ಡೌನ್‌ ಬಿಸಿ ತಟ್ಟಿತ್ತು. ಈಗ ಶೂಟಿಂಗ್‌ಗೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಹೈದರಾಬಾದ್‌ನ ರಾಮಾ ನಾಯ್ಡು ಸ್ಟುಡಿಯೊದಲ್ಲಿ ಚಿತ್ರದ ಅಂತಿಮ ಹಂತದ ಶೂಟಿಂಗ್‌ ನಡೆಯುತ್ತಿದೆ.

ರಾಜ್ಯ ಸರ್ಕಾರ ಸೂಚಿರುವ ಮಾರ್ಗಸೂಚಿ ಅನುಸಾರವೇ ಚಿತ್ರೀಕರಣ ನಡೆಸಲಾಗುತ್ತಿದೆ. ಶೂಟಿಂಗ್‌ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಅಂದಹಾಗೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಪುಲಿ ವಾಸು. ಕಥೆ ಮತ್ತು ಚಿತ್ರಕಥೆಯ ನೊಗವನ್ನು ಅವರೇ ಹೊತ್ತಿದ್ದಾರೆ. ರಿಜ್ವಾನ್ ಎಂಟರ್‌ಟೈನ್‌ಮೆಂಟ್ ಲಾಂಛನದಡಿ ರಿಜ್ವಾನ್ ಹಾಗೂ ಖುಷಿ ಇದಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀನಿವಾಸ್ ಜಿ. ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು, ಎಸ್.ಎಸ್. ತಮನ್ ಸಂಗೀತ ನೀಡಿದ್ದಾರೆ. ಶ್ಯಾಮ್ ಕೆ. ನಾಯ್ಡು ಅವರ ಛಾಯಾಗ್ರಹಣವಿದೆ. ಡ್ರ್ಯಾಗನ್ ಪ್ರಕಾಶ್‌ ಅವರ ಸಾಹಸ ನಿರ್ದೇಶನವಿದೆ. ಮಾರ್ತಾಂಡ್ ಕೆ. ವೆಂಕಟೇಶ್ ಸಂಕಲನ ನಿರ್ವಹಿಸಿದ್ದಾರೆ. ನಂದೀಶ್ ಅವರ ನೃತ್ಯ ನಿರ್ದೇಶನವಿದೆ. ಬ್ರಹ್ಮ ಕಡಲಿ ಅವರ ಕಲಾ ನಿರ್ದೇಶನವಿದೆ. ನರೇಶ್ ವಿ.ಕೆ, ಪೊಸಾನಿ ಕೃಷ್ಣ ಮುರಳಿ, ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆ, ಪ್ರಗತಿ, ಅಜಯ್, ಮಹೇಶ್, ಸತ್ಯ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT