ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನಕ್ಕೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಹೆಜ್ಜೆ ಇಟ್ಟು 9 ವರ್ಷ

Last Updated 10 ಮೇ 2022, 7:56 IST
ಅಕ್ಷರ ಗಾತ್ರ

ರಚಿತಾ ರಾಮ್‌, ಕಿರುತೆರೆ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ನಟಿ. 2013ರ ಮೇ 10ರಂದು ಬಿಡುಗಡೆಯಾಗಿದ್ದ ‘ಬುಲ್‌ಬುಲ್‌’ ಸಿನಿಮಾ ಮುಖಾಂತರ ನಾಯಕಿಯಾಗಿ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದರು.ರಚಿತಾ ಅವರ ಚಂದನವನದ ಪಯಣಕ್ಕೀಗ 9 ವರ್ಷ.

ಟ್ವೀಟ್‌ ಮೂಲಕ ಈ ಪಯಣವನ್ನು ನೆನಪಿಸಿಕೊಂಡಿರುವ ರಚಿತಾ, ‘ಸುದೀರ್ಘ ಪಯಣದ ಮೊದಲ ಹೆಜ್ಜೆ ಬುಲ್‌ಬುಲ್‌. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರಋಣಿ’ ಎಂದಿದ್ದಾರೆ.

ಬಿಂದ್ಯಾ ರಾಮ್‌, ಇದು ರಚಿತಾ ರಾಮ್‌ ಅವರ ಮೂಲ ಹೆಸರು. ಇದು ಬದಲಾದದ್ದು, 2013ರಲ್ಲಿ ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ಬುಲ್‌ಬುಲ್‌’ ಸಿನಿಮಾ ಬಳಿಕ. ಈ ಸಿನಿಮಾ ಬಳಿಕ ಬಿಂದ್ಯಾ, ರಚಿತಾ ರಾಮ್‌ ಆದರು. ಹೆಸರಷ್ಟೇ ಅಲ್ಲ, ಅವರ ಸಿನಿಮಾ ಬದುಕೂ ಇಲ್ಲಿಂದ ಬದಲಾಯಿತು. ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ಎಂದೇ ಖ್ಯಾತಿ ಪಡೆದಿರುವ ರಚಿತಾ, ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲೆಕ್ಕ ಹಾಕಿದರೆ ಹತ್ತಕ್ಕೂ ಹೆಚ್ಚು ಸಿನಿಮಾಗಳು ರಚಿತಾ ಕೈಯಲ್ಲಿವೆ. ಇಷ್ಟೊಂದು ಸಿನಿಮಾ ಬ್ಯಾಂಕ್‌ ಇಟ್ಟುಕೊಂಡಿರುವ ನಟಿ ಚಂದನವನದಲ್ಲಿ ಸದ್ಯಕ್ಕೆ ಬೇರೊಬ್ಬರಿಲ್ಲ ಎನ್ನಬಹುದು.

ನಟ ‘ಡಾಲಿ’ ಧನಂಜಯ್‌ ಜೋಡಿಯಾಗಿ ರಚಿತಾ ನಟಿಸಿರುವ ‘ಮಾನ್ಸೂನ್‌ ರಾಗ’ ಆ.12ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ಕ್ರಾಂತಿ’ ಸಿನಿಮಾ ಚಿತ್ರೀಕರಣದಲ್ಲೂ ರಚಿತಾ ತೊಡಗಿಸಿಕೊಂಡಿದ್ದಾರೆ. ನೀನಾಸಂ ಸತೀಶ್‌ ಜೊತೆಗೆ ‘ಮ್ಯಾಟ್ನಿ’, ‘ಲವ್‌ ಮಿ ಆರ್‌ ಹೇಟ್‌ ಮಿ’, ‘ಶಬರಿ’ ಹೀಗೆ ಅವರ ಸಿನಿಮಾ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ರಚಿತಾ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT