ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಮ್‌ ಎಳೆದು ಮತ್ತೇರಿಸಿದ ಮಾದಕ ನಟಿ

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಉಪೇಂದ್ರ ನಾಯಕನಾಗಿ ನಟಿಸಿದ್ದ ‘ಐ ಲವ್‌ ಯು’ ಚಿತ್ರದಲ್ಲಿ ತೆರೆದೆದೆಯ ಪ್ರದರ್ಶನದಿಂದ ಪಡ್ಡೆ ಹುಡುಗರ ಹೃದಯದ ಬಿಸಿ ಏರಿಸಿದ್ದ ರಚಿತಾ ರಾಮ್‌, ಈಗ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಧಮ್‌ ಎಳೆದು, ನಾಯಕ ರಾಣ ಜತೆಗೆ ಲಿಪ್‌ಲಾಕ್‌ ದೃಶ್ಯದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ‘ಐ ಲವ್‌ ಯು’ ಚಿತ್ರಕ್ಕಿಂತಲೂ‘ಏಕ್‌ ಲವ್‌ ಯಾ’ ಚಿತ್ರದಲ್ಲಿ ತುಂಬಾ ಮಾದಕವಾಗಿ ಕಾಣಿಸಿಕೊಂಡು, ಪಡ್ಡೆಹುಡುಗರ ನಿದ್ದೆಗೆಡಿಸುವ ಸೂಚನೆ ನೀಡಿದ್ದಾರೆ.

ನಿರ್ಮಾಪಕಿ ರಕ್ಷಿತಾಪ್ರೇಮ್ ಒಡೆತನದ ‘ಲೆವಲ್ ಪಬ್’ನಲ್ಲಿಪ್ರೇಮಿಗಳ ದಿನದಂದು ನೂರಾರು ಪ್ರೇಮಜೋಡಿಗಳ ಸಮ್ಮುಖದಲ್ಲಿ ಚಿತ್ರದಟೀಸರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ನಟಿ ರಚಿತಾ ರಾಮ್‌ ‘ಪಾತ್ರದ ಬಗ್ಗೆ ಏನೂ ಹೇಳುವುದಿಲ್ಲ. ಹದಿನೈದು ದಿನಗಳು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಎರಡು ಹಾಡುಗಳನ್ನು ನನಗಾಗಿಯೇ ಸೃಷ್ಟಿಸಲಾಗಿದೆ. ಪ್ರೀತಿಯಲ್ಲಿ ನೋವುಂಡ ಹುಡುಗಿಯರಿಗೆ ಒಂದು ಹಾಡು ಮೀಸಲಿಡಲಾಗಿದೆ. ಪಾತ್ರಕ್ಕಾಗಿ ಕಷ್ಟಪಟ್ಟು ಸಿಗರೇಟ್ ಸೇದಿದ್ದೇನೆ’ ಎನ್ನುತ್ತಲೇ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇದೆ. ಹೇಳೋ ಭಗವಂತ’ ಹಾಡಿನ ಸಾಲನ್ನು ಅವರುಹರಿಬಿಟ್ಟರು.

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ ನಿರ್ದೇಶಕ ಪ್ರೇಮ್‌, ಚಿತ್ರದಟೀಸರ್‌ಯುರೋಪ್‍ನಲ್ಲಿ ಸಿದ್ಧಪಡಿಸಲಾಗಿದೆ. ನೈಜ ಕಥೆಯ ಒಂದು ಎಳೆ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಅರ್ಜುನ್‍ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿಆರು ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಮೇನಲ್ಲಿ ಸಿನಿಮಾ ತೆರೆಗೆ ತರುವ ಯೋಜನೆ ಇದೆ ಎಂದರು.

ರಕ್ಷಿತಾ ಪ್ರೇಮ್‌ ಸಹೋದರ ರಾಣ ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು, ಅವಕಾಶ ನೀಡಿದ ತನ್ನ ಭಾವ ಪ್ರೇಮ್‌ಗೆ ಕೃತಜ್ಞತೆ ಹೇಳುವಷ್ಟರ ಮಟ್ಟಿಗೆ ಮಿತಭಾಷಿಯಾದರು. ನಾಯಕಿಗ್ರೀಷ್ಮಾ ನಾಣಯ್ಯ ಕೂಡ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಥ್ಯಾಂಕ್ಸ್‌ ಎಂದರು.

ನಟ ಸುಚೇಂದ್ರ ಪ್ರಸಾದ್‌ ‘ಕ್ರಿಯಾಶೀಲ, ಸೃಜನಶೀಲ ಚಿತ್ರದಲ್ಲಿ ನಟಿಸಿದ್ದೇನೆಂಬ ಹೆಮ್ಮೆ ಇದೆ. ನಿರ್ದೇಶಕರು ಮತ್ತೊಂದುನಾಡಗೀತೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT