ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್‌ಗೆ ಅಭಿಮಾನಿಗಳಿಂದ ಉಘೇ...ಉಘೇ...

ಚಂದನವನದ ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಚಂದನವನದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಅಭಿಮಾನಿಗಳಿಗೆ ಹತ್ತಿರವಾಗಲು ಫೋಟೊಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ. ಸೋಮವಾರ ಅಪ್ಲೋಡ್ ಮಾಡಿರುವ ಅವರ ಡ್ಯಾನ್ಸ್ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು ಆ ನೃತ್ಯಕ್ಕೆ ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ.
ಈ ಡ್ಯಾನ್ಸ್‌ನಲ್ಲಿ ಸ್ಟೈಲಿಶ್ ಆಗಿ ಕಾಣುವ ರಾಧಿಕಾ ಸಖತ್ ಎನರ್ಜಿಯಿಂದ ನೃತ್ಯ ಮಾಡಿದ್ದಾರೆ. ಬಾಲಿವುಡ್‌ನ ‘ಮೇರಾ ಯಾರಾ’ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ವರ್ಷದ ದಿನ ಅವರು ಹಂಚಿಕೊಂಡಿದ್ದ ಮತ್ತೊಂದು ಡ್ಯಾನ್ಸ್ ಕೂಡ ಅಭಿಮಾನಿಗಳ ಮನಗೆದ್ದಿತ್ತು.
ರಾಧಿಕಾ ಸದ್ಯ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂಟ್ರಾಕ್ಟ್, ಭೈರಾದೇವಿ ಹಾಗೂ ರಾಜೇಂದ್ರ ಪೊನ್ನಪ್ಪ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಇದೇ ವರ್ಷ ಈ ಸಿನಿಮಾಗಳು ತೆರೆಕಾಣುವ ಸಾಧ್ಯತೆ ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.