ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ ‘ಮದನಿಕ’ ಚಿತ್ರ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಬಿ.ಎಸ್.ಸಂಜಯ್ ನಿರ್ದೇಶನದ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.

‘400 ವರ್ಷಗಳ ಹಿಂದಿನ ಕಥೆ. ರಾಗಿಣಿ ಮದನಿಕ ಆಗಿ ಅಭಿನಯಿಸಿದ್ದಾರೆ. ಆಕರ್ಷಕ, ಸುಂದರ ಹುಡುಗಿಯ ಪಾತ್ರವಿದು. ಈ ಕಥೆ ಮಾಡುವಾಗ ನನಗೆ ಅರಿವಿಲ್ಲದಂತೆ ಒಂದಷ್ಟು ಘಟನೆಗಳು ನಡೆದವು. ಅವುಗಳನ್ನಿಟ್ಟುಕೊಂಡು ಕಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಸಿನಿಮಾದಲ್ಲಿ ಹತ್ತು ಹಾಡುಗಳಿವೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ.

‘ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಎರಡೂವರೆ ವರ್ಷಗಳ ಪಯಣವಿದು. ಕಥೆ ತುಂಬಾ ಚೆನ್ನಾಗಿದೆ. ಈ ಅವಧಿಯಲ್ಲಿ ಸಿನಿಮಾ ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ಆದರೆ ಭಾವನೆಗಳು ಬದಲಾಗಿಲ್ಲ. ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಸಿನಿಮಾ’ ಎಂದರು ರಾಗಿಣಿ.

ಸಲಾಂ ಕೇರಳ ಸಂಗೀತ, ಆರ್. ಗಿರಿ ಛಾಯಾಚಿತ್ರಗ್ರಹಣವಿದೆ. ಸುಜಾತ ಲಕ್ಷ್ಮಿ ಹಾಗೂ ಕುಮಾರಸ್ವಾಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1829964397

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.