ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಚಿತ್ರದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Last Updated 30 ಅಕ್ಟೋಬರ್ 2022, 7:34 IST
ಅಕ್ಷರ ಗಾತ್ರ

ನಟಿ ರಾಗಿಣಿ ದ್ವಿವೇದಿ ಪಾಲಿಗೆ ಮತ್ತೆ ಒಳ್ಳೆಯ ದಿನಗಳ ಪ್ರಾರಂಭವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಗಿಣಿ, ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಂಪೇಗೌಡ, ವೀರಮದಕರಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ, ‘ಶಂಭೋ ಶಿವ ಶಂಕರ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಚಿತ್ರದ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದೆ. ನಿರ್ಮಾಣ ಸಂಸ್ಥೆ, ಕಲಾವಿದರು ಹಾಗೂ ತಂತ್ರಜ್ಞರು ಸೇರಿದಂತೆ ಉಳಿದ ಮಾಹಿತಿ ಹೊರಬಿದ್ದಿಲ್ಲ.

ಮೊನ್ನೆಯಷ್ಟೇ ರಾಗಿಣಿ ದ್ವಿವೇದಿ ಅವರ ಯೋಗಾಸಾನದ ಚಿತ್ರಗಳು ಎಲ್ಲೆಡೆ ಹರಿದಾಡಿತ್ತು. ದೀಪಾವಳಿಯಲ್ಲಿ ಸೀರೆಯುಟ್ಟು ಮಿಂಚಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ.
ಮಲಯಾಳದಲ್ಲಿ ಒಂದು ಸಿನಿಮಾ ಮುಗಿಸಿರುವ ರಾಗಿಣಿ, ಗಾಂಧಿಗಿರಿ, ಒನ್ ಟು ಒನ್, ಕರ್ವ 3 ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT