ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ ರಾಣಿ ರೋರರ್ ರಾಕೆಟ್’ ಸೆ. 23ಕ್ಕೆ ತೆರೆಗೆ

Last Updated 9 ಸೆಪ್ಟೆಂಬರ್ 2022, 8:30 IST
ಅಕ್ಷರ ಗಾತ್ರ

‘ಚುಟು ಚುಟು ಅಂತೈತಿ’ ಎಂಬ ಜನಪ್ರಿಯ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ನೃತ್ಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಭೂಷಣ್, ಈಗ ‘ರಾಜ ರಾಣಿ ರೋರರ್ ರಾಕೆಟ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರ ಸೆ. 23ರಂದು ತೆರೆಗೆ ಬರುತ್ತಿದೆ.

ನೃತ್ಯ ನಿರ್ದೇಶಕನಾಗಿ ‘ರಾಂಬೋ 2’ ಚಿತ್ರದ ಮೂಲಕ ನನ್ನ ಸಿನಿಮಾ ಪ್ರಯಾಣ ಆರಂಭವಾಯಿತು. ನಂತರ ‘ನಟಸಾರ್ವಭೌಮ’, ‘ರಾಬರ್ಟ್’, ‘ಬೆಲ್ ಬಾಟಮ್’ ನಂತಹ ಸೂಪರ್ ಹಿಟ್ ಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿದ್ದೆ. ನಾಯಕನಾಗಬೇಕೆಂಬ ಆಸೆಯಿತ್ತು. ಈ ಚಿತ್ರದ ನಿರ್ದೇಶಕ ಕೆಂಪೇಗೌಡ ಮಾಗಡಿ ಒಳ್ಳೆಯ ಕಥೆ ಹೇಳಿದರು. ನಾಗರಾಜ್ ವಿ. ಅಜ್ಜಂಪುರ ನಿರ್ಮಾಣಕ್ಕೆ ಮುಂದಾದರು.

‘ರಾಜ ರಾಣಿ ರೋರರ್ ರಾಕೆಟ್’ ಎಂದರೆ ನಾಲ್ಕು ಪಾತ್ರಗಳ ಹೆಸರು. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದೇ ಕಥಾಹಂದರ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನೃತ್ಯ ನಿರ್ದೇಶಕ ನಾಯಕನಾಗಿರುವ ಕಾರಣ, ಎಲ್ಲಾ ನೃತ್ಯ ನಿರ್ದೇಶಕರು ನನಗೆ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 23ರಂದು ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಭೂಷಣ್.

ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಕೆಂಪೇಗೌಡ ಮಾಗಡಿ ಸಹ ಚಿತ್ರದ ಬಗ್ಗೆ ವಿವರಣೆ ನೀಡಿದರು.

ಮನೋಜ್ ಹಾಗೂ ಸುಷ್ಮಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಹಾಗೂ ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT