ರಿತೇಶ್ ದೇಶ್ಮುಖ್ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರುವ ಐತಿಹಾಸಿಕ ಕಥಾಹಂದರವುಳ್ಳ ‘ರಾಜಾ ಶಿವಾಜಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈ ಫಿಲ್ಮ್ ಕಂಪನಿಯ ಬ್ಯಾನರ್ ಅಡಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಹಾಗೂ ಜಿಯೋ ಸ್ಟುಡಿಯೋಸ್ ಸಹಯೋಗದಲ್ಲಿ ರಾಜಾ ಶಿವಾಜಿ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾಗೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ.

‘ರಾಜಾ ಶಿವಾಜಿ’ ಸಿನಿಮಾವು ಛತ್ರಪತಿ ಶಿವಾಜಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರವಾಗಿದೆ. ರಿತೇಶ್ ದೇಶ್ಮುಖ್ ಅವರು ಸಿನಿಮಾದ ನಿರ್ದೇಶನದ ಜತೆಗೆ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಾರ್ಚ್ 31ರಂದು ಸಿನಿಮಾದ 2 ನಿಮಿಷ 31 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದ ಕುರಿತ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಸಿನಿಮಾದಲ್ಲಿ ಸಂಜಯ್ ದತ್ ಅವರು ಅಫ್ಜಲ್ ಖಾನ್ ಪಾತ್ರದಲ್ಲಿ ನಟಿಸಿದ್ದಾರೆ. ಮಹೇಶ್ ಮಾಂಜ್ರೇಕರ್ ಅವರು ಲಖೂಜಿ ಜಾಧವ್ ಪಾತ್ರದಲ್ಲಿ, ಅಭಿಷೇಕ್ ಬಚ್ಚನ್ ಅವರು ಸಂಭಾಜಿ ಶಹಾಜಿ ಭೋಸಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ ವಿದ್ಯಾ ಬಾಲನ್, ಜೆನಿಲಿಯಾ ದೇಶ್ಮುಖ್, ಭಾಗ್ಯಶ್ರೀ, ಫರ್ದೀನ್ ಖಾನ್ ಮತ್ತು ಬೋಮನ್ ಇರಾನಿ ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಅವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೇ 1ರಂದು ರಾಜಾ ಶಿವಾಜಿ ಸಿನಿಮಾವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹಿಂದಿ, ಮರಾಠಿ ಹಾಗೂ ತೆಲುಗು ಭಾಷೆಯಲ್ಲಿಯೂ ಚಿತ್ರ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.