ಶನಿವಾರ, ಮೇ 21, 2022
28 °C

ಯೂಟ್ಯೂಬ್‌ನಲ್ಲಿ ‘ರಾಜಮಾರ್ತಾಂಡ’ ಹವಾ: 4.50 ಲಕ್ಷಕ್ಕೂ ಅಧಿಕ ವೀವ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಬಿಡುಗಡೆ ದಿನವೇ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಅವರ ಅಭಿನಯದ ‘ರಾಜಮಾರ್ತಾಂಡ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ 4.50 ಲಕ್ಷಕ್ಕೂ ಅಧಿಕ ವ್ಯೂವ್ಸ್‌ಗಳನ್ನು ಪಡೆದಿದೆ.

ಅಪ್ಪನ ಚಿತ್ರದ ಟ್ರೇಲರ್‌ ಅನ್ನು ಮಗ ಜೂ.ಚಿರು ಬಿಡುಗಡೆ ಮಾಡಿದ್ದು, ಇದರ ತುಣುಕು ಟ್ರೇಲರ್‌ನ ಆರಂಭದಲ್ಲೇ ಇದೆ. ಅಮ್ಮ ಮೇಘನಾ ರಾಜ್‌ ಮಗನ ಪುಟಾಣಿ ಬೆರಳು ಹಿಡಿದು ಟ್ರೇಲರ್‌ ಆರಂಭಿಸುವ ದೃಶ್ಯ ಇದರಲ್ಲಿದೆ. ಚಿರಂಜೀವಿ ಸರ್ಜಾ ನಿಧನರಾದ ಕಾರಣ, ಚಿತ್ರಕ್ಕೆ, ತಮ್ಮ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದರು.

ಟ್ರೇಲರ್‌ನ ಆರಂಭಿಕ ಡೈಲಾಗ್‌ನಲ್ಲೇ ಅಣ್ಣನ ಆ್ಯಕ್ಷನ್‌ ಖದರ್‌ ಅನ್ನು ಧ್ವನಿ ಮೂಲಕ ಧ್ರುವ ತೆರೆ ಮೇಲೆ ತೋರಿಸಿದ್ದಾರೆ. ಟ್ರೇಲರ್‌ ಕೊನೆಯಲ್ಲಿ ‘ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಕೊನೆಯವರೆಗೂ ಚಿರಋಣಿ ಆಗಿರುತ್ತೇನೆ, ಜೈ ಶ್ರೀರಾಮ್‌, ಜೈ ಆಂಜನೇಯ’ ಎನ್ನುವ ಮೂಲಕ ಅಭಿಮಾನಿಗಳಿಗೆ ಚಿರು ಕೈಮುಗಿದಿದ್ದಾರೆ.

ಕೆ.ರಾಮ್‌ನಾರಾಯಣ್‌ ನಿರ್ದೇಶನದ ಈ ಚಿತ್ರವು ಶೀಘ್ರದಲ್ಲೇ ಚಿತ್ರವು ತೆರೆಯ ಮೇಲೆ ಬರಲಿದೆ. ‘ಈ ಚಿತ್ರದ ಬಗ್ಗೆ ಮೊದಲ ದಿನದಿಂದಲೂ ಚಿರು ಬಹಳ ಉತ್ಸುಕರಾಗಿದ್ದರು. ಉತ್ಸುಕರಾಗಿದ್ದರು ಎನ್ನುವುದಕ್ಕಿಂತ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಎಷ್ಟು ಇಷ್ಟಪಟ್ಟು ಮಾಡುತ್ತಿದ್ದರು ಎಂದರೆ, ಸಿನಿಮಾ ಡೈಲಾಗ್‌ಗಳು ನಮಗೆ ಇಂದಿಗೂ ನೆನಪಿದೆ. ಈ ಸಿನಿಮಾ ಚಿರು ಅವರ ಮನಸ್ಸಿಗೆ ಹತ್ತಿರವಾಗಿತ್ತು. ತಮ್ಮ ಸಿನಿಮಾ ಬದುಕಿನಲ್ಲಿ ವಿಶೇಷವಾದ ಚಿತ್ರ ಎಂದು ಇದನ್ನು ಅಂದುಕೊಂಡಿದ್ದರು’ ಎಂದು ಮೇಘನಾ ಗುರುವಾರ ವಿಡಿಯೊವೊಂದರಲ್ಲಿ ಹೇಳಿದ್ದರು.

ಯೂಟ್ಯೂಬ್‌ ಲಿಂಕ್‌:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು