ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ.‌ ಚಿರು ಹಸ್ತದಿಂದ ರಾಜಮಾರ್ತಾಂಡ ಚಿತ್ರದ ಟ್ರೇಲರ್‌ ಬಿಡುಗಡೆ

Last Updated 18 ಫೆಬ್ರುವರಿ 2021, 10:18 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಮೇಘನಾ ರಾಜ್ ಇತ್ತೀಚೆಗಷ್ಟೇ ಜೂನಿಯರ್‌ ಚಿರುವಿನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ದಿವಂಗತ ಚಿರಂಜೀವಿ ಸರ್ಜಾ ಅವರ ಲಕ್ಷಾಂತರ ಅಭಿಮಾನಿಗಳು ಜೂ.ಚಿರುವನ್ನು ಕಂಡು ಸಂತಸಪಟ್ಟಿದ್ದರು. ಇದೀಗ ಫೆ.19ರಂದು ಇದೇ ಜೂ.ಚಿರು ತನ್ನ ತಂದೆಯ ಬಹುನಿರೀಕ್ಷಿತ ರಾಜಮಾರ್ತಾಂಡ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಲಿದ್ದಾನೆ!

ಚಿರಂಜೀವಿ ಸರ್ಜಾ ನಿಧನರಾದ ಕಾರಣ, ಚಿತ್ರಕ್ಕೆ, ತಮ್ಮ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದರು. ಪೊಗರು ಚಿತ್ರದ ಬಿಡುಗಡೆ ದಿನವೇ ರಾಜಮಾರ್ತಾಂಡ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸುವುದಾಗಿ ಚಿತ್ರದ ನಿರ್ದೇಶಕ ಕೆ.ರಾಮ್‌ನಾರಾಯಣ್‌ ಇತ್ತೀಚೆಗಷ್ಟೇ ತಿಳಿಸಿದ್ದರು. ಇದೀಗ, ಜೂ.ಚಿರು ಅಮೃತಹಸ್ತದಿಂದಲೇ ಟ್ರೇಲರ್‌ ಬಿಡುಗಡೆಗೊಳಿಸುವುದಾಗಿ ರಾಮನಾರಾಯಣ್‌ ಅವರು ಫೇಸ್‌ಬುಕ್‌ ಮೂಲಕ ತಿಳಿಸಿದ್ದು, ಜೂ.ಚಿರುವಿನ ಜೊತೆಗಿರುವ ಸೆಲ್ಫಿ ಫೋಟೋ ಕೂಡಾ ಅಪ್‌ಲೋಡ್‌ ಮಾಡಿದ್ದಾರೆ.

ಫೆ.19ರ ಬೆಳಗ್ಗೆ 7ಗಂಟೆಗೆ ಟ್ರೇಲರ್‌ ಬಿಡುಗಡೆ ಆಗಲಿದೆ. 2018ರಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಹಳೆಗನ್ನಡದ ಡೈಲಾಗ್‌ಗಳ ಮೂಲಕ ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಕಾಣಿಸಿಕೊಂಡು ಯುವಸಾಮ್ರಾಟ್‌ ಮಿಂಚಿದ್ದರು. ಶೀಘ್ರದಲ್ಲೇ ಚಿತ್ರವು ತೆರೆಯ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT