ಹತ್ತು ಎಂಜಿಆರ್ ಒಬ್ಬ ರಾಜ್‌ಕುಮಾರ್‌ಗೆ ಸಮ

7

ಹತ್ತು ಎಂಜಿಆರ್ ಒಬ್ಬ ರಾಜ್‌ಕುಮಾರ್‌ಗೆ ಸಮ

Published:
Updated:
Deccan Herald

ತಮಿಳಿನ ಸೂಪರ್‌ಸ್ಟಾರ್ ರಜನೀಕಾಂತ್ ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಆ ವಿಷಯ ಜಗಜಾಹೀರು. ಅವಕಾಶ ಸಿಕ್ಕಾಗಲೆಲ್ಲ ರಾಜ್‌ಕುಮಾರ್ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.

‘2.0’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜ್‌ಕುಮಾರ್ ಅವರ ಮೇಲಿನ ಅಭಿಮಾನವನ್ನು ನೆನೆದಿದ್ದಾರೆ ರಜನೀಕಾಂತ್. ಅದು ಎಂಜಿಆರ್‌ಗೆ ಹೋಲಿಕೆ ಮಾಡಿ ಹಾಡಿಹೊಗಳಿದ್ದಾರೆ.

‘2.0’ ಸಿನಿಮಾವನ್ನು ಕಣ್ತುಂಬಿಕೊಳ್ಳಲು ನಿಮ್ಮ ಅಭಿಮಾನಿಗಳು ಹೇಗೆ ಕಾತುರರಾಗಿದ್ದಾರೆಯೋ ಅದೇ ರೀತಿ ನೀವು ಅಭಿಮಾನಿಯಾಗಿ ಯಾವ ನಟನ ಸಿನಿಮಾಗಾಗಿ ಕಾಯುತ್ತಿದ್ದಿರಿ ಎಂದು ಮಾಧ್ಯಮವೊಂದರ ನಿರೂಪಕ ಕೇಳಿದರು.

ಅದಕ್ಕೆ ಉತ್ತರಿಸಿದ ರಜನಿ, ‘ರಾಜ್‌ಕುಮಾರ್ ಅವರ ಅಭಿಮಾನಿ ನಾನು. ತಮಿಳುನಾಡಿನಲ್ಲಿ ಎಂಜಿಆರ್ ಹೇಗೋ, ಕರ್ನಾಟಕದಲ್ಲಿ ರಾಜ್‌ಕುಮಾರ್‌ ಸಹ ಹಾಗೇ. 10 ಎಂಜಿಆರ್, ಒಬ್ಬ ರಾಜ್‌ಕುಮಾರ್‌ಗೆ ಸಮ’ ಎಂದಿದ್ದಾರೆ.

ಕಳೆದ ವರ್ಷ ಚೈನ್ನೈನ ಕೂಡಂಬಾಕಂ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿದ್ದ ರಜನೀಕಾಂತ್, ‘ನನಗೆ ನನ್ನ ಅಭಿಮಾನಿಗಳ ತವಕ ಅರ್ಥವಾಗುತ್ತದೆ. ಚಿಕ್ಕವನಿದ್ದಾಗ ನಾನೂ ರಾಜ್‌ಕುಮಾರ್ ಅವರನ್ನು ನೋಡಲು ಭಾರಿ ಜನಸಂದಣಿಯ ನಡುವೆ ನುಗ್ಗಿ ಹೋಗಿದ್ದೆ. ಆಗ ನನಗೆ 16 ವರ್ಷ.

ಬೆಂಗಳೂರಿನಲ್ಲಿ ಆಯೋಜಿಸಿದ್ದ, ರಾಜ್‌ಕುಮಾರ್ ಅವರ ಅಭಿನಯದ ಚಿತ್ರವೊಂದರ 100ನೇ ದಿನದ ಕಾರ್ಯಕ್ರಮ ಅದಾಗಿತ್ತು. ಅದೇ ಮೊದಲ ಬಾರಿಗೆ ರಾಜಣ್ಣ ಅವರನ್ನು ನೋಡಿದ್ದು. ಅವರನ್ನು ನೋಡಿದ ಕ್ಷಣ ನಾನು ಮೈ ಮರೆತು ನಿಂತು ಬಿಟ್ಟಿದ್ದೆ. ಕಣ್ಣ ಮುಂದೆ ಅವರ ಸಿನಿಮಾದ ದೃಶ್ಯಗಳೇ ಮೂಡುತ್ತಿದ್ದವು. ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದೆ. ಆ ಅವಕಾಶ ಲಭಿಸಿದ್ದು ನನ್ನ ಜೀವನದ ಅತ್ಯಂತ ಪುಣ್ಯದ ಗಳಿಗೆ’ ಎಂದು ಸ್ಮರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 36

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !