ಚೆನ್ನೈ (ಪಿಟಿಐ): ‘ಅಭಿಮಾನಿಗಳಿಗೆ ತಮ್ಮ ಸುರಕ್ಷತೆಯೇ ಆದ್ಯತೆಯಾಗಿರಬೇಕು. ಅಭಿಮಾನದಿಂದಾಗುವ ತೊಂದರೆಗಳನ್ನು ತಾವೇ ಎದುರಿಸಬೇಕು ಎಂಬುದನ್ನು ಮರೆಯಬಾರದು’ ಎಂದು ನಟ ರಜನಿಕಾಂತ್ ಅವರು ಸಲಹೆ ನೀಡಿದರು.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವಜನರು ಶಿಕ್ಷಣ ಮತ್ತು ದೈಹಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಚುನಾವಣಾ ರ್ಯಾಲಿ ವೇಳೆ ನಟ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಭಿಮಾನಿಗಳು ಎಚ್ಚರದಿಂದ ಇರಬೇಕು. ವಿದ್ಯಾರ್ಥಿ ಜೀವನವೂ ಮಹತ್ವದಾಗಿದ್ದು, ಆ ಸಮಯ ವ್ಯರ್ಥ ಮಾಡಿಕೊಂಡರೆ ಜೀವನ ಪೂರ್ತಿ ಕಷ್ಟಪಡಬೇಕಾಗುತ್ತದೆ. ನಿಮ್ಮ ಸಂಪೂರ್ಣ ಆಲೋಚನೆ ಮತ್ತು ಗಮನ ಶಿಕ್ಷಣದ ಮೇಲೆ ಇರಬೇಕು’ ಎಂದು ಹೇಳಿದರು.

‘ಮಾದಕ ವಸ್ತುಗಳ ದಾಸರಾಗಬೇಡಿ. ಇದು ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ನರಕಕ್ಕೆ ತಳ್ಳುತ್ತದೆ. ಇಂತಹ ವಿಷಯಗಳಿಗೆ ಪ್ರಚೋದಿಸುವ ಸ್ನೇಹಿತರಿದ್ದರೆ, ಅವರಿಂದ ದೂರ ಇರಿ’ ಎಂದು ಸಲಹೆ ನೀಡಿದರು.

ಮುಂದಿನ ಚಿತ್ರದ ಕುರಿತು ಮಾತನಾಡಿದ ಅವರು, ಇನ್ನೂ ಶೇ 20ರಷ್ಟು ಚಿತ್ರೀಕರಣ ಬಾಕಿ ಉಳಿದಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-1901967198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.