ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಬಹುನಿರೀಕ್ಷಿತ ‘ತಲೈವರ್ 173’ ಚಿತ್ರದ ನಿರ್ದೇಶಕರು ಮತ್ತೆ ಬದಲಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

‘ತಲೈವರ್ 173’ ಚಿತ್ರವು ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಸುಂದರ್ ಸಿ. ಅವರು ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಕಾರಣಾಂತರಗಳಿಂದ ಅವರು ಈ ಚಿತ್ರದಿಂದ ಹೊರ ಹೋಗಿದ್ದರು.
.ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ನೀಡಿದ ನಟ ಧ್ರುವ ಸರ್ಜಾ.
ಬಳಿಕ, ‘ಡಾನ್’ ಚಿತ್ರದ ಸಿಬಿ ಚಕ್ರವರ್ತಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರು ಕೂಡ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ. ಈಗ, ‘ಡ್ರ್ಯಾಗನ್’, ‘ಓ ಮೈ ಕಡವು’ ಖ್ಯಾತಿಯ ಅಶ್ವಥ್ ಮಾರಿಮುತ್ತು ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ.

ಸದ್ಯ, ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿದ ನಂತರ ಈ ಚಿತ್ರದ ಕೆಲಸ ಆರಂಭವಾಗಲಿದೆ. ನಿರೀಕ್ಷೆಯಂತೆ ಈ ಚಿತ್ರದ ಕೆಲಸ ಮುಗಿದರೆ 2027ರ ಸಂಕ್ರಾಂತಿ ಹಬ್ಬದಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.