ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ಕಾರು ಚಾಲಕನ ತಪ್ಪಿಗೆ ದಂಡತೆತ್ತ ‘ಸೂಪರ್‌ಸ್ಟಾರ್’ ರಜನಿಕಾಂತ್‌!

Last Updated 25 ಜುಲೈ 2020, 9:21 IST
ಅಕ್ಷರ ಗಾತ್ರ
ADVERTISEMENT
""

ಅಂದು ಜೂನ್ 26. ‘ಒಎಂಆರ್‌’ ಎಂದೇ ಪ್ರಸಿದ್ಧಿ ಪಡೆದಿರುವ ಚೆನ್ನೈನ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿ ‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ಕಾರು ಸಂಚರಿಸುತ್ತಿತ್ತು. ಆ ರಸ್ತೆಯಲ್ಲಿಯೇ ನಿಂತಿದ್ದ ಸಂಚಾರ ಪೊಲೀಸರು ಕಾರನ್ನು ಅಡ್ಡಹಾಕಿದರು. ರಜನಿಯ ಕಾರು ಚಾಲಕ ಸೀಟ್‌ಬೆಲ್ಡ್‌ ಧರಿಸದೇ ಚಲಾಯಿಸುತ್ತಿದ್ದುದೇ ಇದಕ್ಕೆ ಕಾರಣ. ಪೊಲೀಸರು ಚಾಲಕನಿಗೆ ಬುದ್ಧಿ ಹೇಳಿ ₹ 100 ದಂಡ ವಿಧಿಸಿದರು. ಹಲವು ದಿನಗಳು ಕಳೆದರೂ ಈ ದಂಡ ಮಾತ್ರ ಪಾವತಿಯಾಗಿರಲಿಲ್ಲ.

ಕಳೆದ ಜುಲೈ 23ರಂದು ರಜನಿ ಬಾಕಿ ಉಳಿಸಿಕೊಂಡಿದ್ದ ದಂಡ ಪಾವತಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಹಿಂದಿರುವ ಅಸಲಿ ಕಾರಣವೂ ಅಷ್ಟೇ ಕುತೂಹಲಕಾರಿಯಾಗಿದೆ.

ಇತ್ತೀಚೆಗೆ ರಜನಿಕಾಂತ್‌ ಚೆನ್ನೈನಲ್ಲಿ ಮಾರ್ಸ್‌ ಧರಿಸಿಕೊಂಡು ಲ್ಯಾಂಬೊರ್ಗಿನಿ ಯುರಸ್‌ ಕಾರು ಚಲಾಯಿಸಿದ ಪೋಟೊ ದೊಡ್ಡ ಸುದ್ದಿಯಾಗಿತ್ತು. ಚೆಂಗಲ್‌ಪೇಟ್‌ ಜಿಲ್ಲೆಗೆ ಹೊಂದಿಕೊಂಡಿರುವ ತನ್ನ ಕೆಲಂಬಕ್ಕಂ ಫಾರ್ಮ್‌ಹೌಸ್‌ಗೆ ರಜನಿ ಲ್ಯಾಂಬೊರ್ಗಿನಿ ಯುರಸ್‌ನಲ್ಲಿ ಕುಟುಂಬ ಸಮೇತ ಹೋಗಿದ್ದರು. ತಮಿಳುನಾಡಿನಲ್ಲಿ ಜುಲೈ 31ರವರೆಗೆ ಲಾಕ್‌ಡೌನ್‌ ಮುಂದುವರಿದಿದೆ. ಈ ನಡುವೆಯೇ ತಲೈವ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಯಣಿಸಲು ಇ–ಪಾಸ್‌ ಪಡೆದಿದ್ದರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು.

ರಜನಿಕಾಂತ್‌ ಕಾರು ಚಾಲಕನಿಗೆ ದಂಡ ವಿಧಿಸಿದ್ದ ರಶೀದಿ

ಚಾಲಕ ಮಾಡಿದ ತಪ್ಪಿಗೆ ರಜನಿಕಾಂತ್‌ ₹ 100 ದಂಡ ಪಾವತಿಸಿ ಜುಲೈ 23ರಂದು ಇ–ಪಾಸ್‌ಗೆ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಇ–ಪಾಸ್‌ ಜೊತೆಗೆ ಅವರ ಕಾರಿನ ಸಂಖ್ಯೆ, ಆಧಾರ್‌ ಮಾಹಿತಿಯು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇ–ಪಾಸ್‌ ಪಡೆದ ಬಳಿಕವೇ ರಜನಿ ತನ್ನ ಫಾರ್ಮ್‌ಹೌಸ್‌ಗೆ ಲ್ಯಾಂಬೊರ್ಗಿನಿ ಯುರಸ್‌ನಲ್ಲಿ ತೆರಳಿದ್ದಾರೆ ಎಂಬುದು ಅಧಿಕೃತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT