ಮಂಗಳವಾರ, ಜನವರಿ 19, 2021
18 °C

ರಾಜೀವ್‌ ಲಕ್ಷ್ಮಣ್‌ ಜೊತೆ ಸುಶಾಂತ್‌ ಪ್ರೇಯಸಿ ರಿಯಾ: ಫೊಟೊ ವೈರಲ್‌, ಸ್ಪಷ್ಟನೆ  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಮಂದಿಯೇ ಹಾಗೆ ಅನ್ನಿಸುತ್ತೆ. ವಿವಾದ ಸೃಷ್ಟಿಸಿ ಬಳಿಕ ತೇಪೆ ಹಚ್ಚುವ ಪ್ರಯತ್ನ ಮಾಡುತ್ತಾರೆ. ಜಗತ್ತಿಗೆ ಏನನ್ನೋ ತಿಳಿಸದಂತೆ ಇರಬೇಕು. ತಪ್ಪಿನಿಂದಲೂ ಬಚಾವ್ ಆಗಬೇಕು. ಸದ್ಯ, ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣ್‌ಗೆ ಈ ಮಾತು ಸರಿಯಾಗಿಯೇ ಹೋಲುತ್ತೆ.

 ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಜೊತೆಗಿದ್ದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದ ಈತ ‘ಇವಳು ನನ್ನುಡುಗಿ‘ ಅಂತಾ ಬರೆದುಕೊಂಡಿದ್ದರು. ಇದೀಗ, ಫೊಟೋಗಳು ಎಲ್ಲೆಡೆ ವೈರಲ್ ಆದ ಮೇಲೆ ಎಲ್ಲವನ್ನೂ ಡಿಲಿಟ್ ಮಾಡಿ, ನನ್ನ ಅನಗತ್ಯ ಪದಗಳಿಂದ  ಸುಖಾ ಸುಮ್ಮನೆ ಅವಳಿಗೆ ತೊಂದರೆ ಮಾಡಿದೆನೇನೋ ಎಂಬ ಪಾಪ ಪ್ರಜ್ಞೆ ತೋರ್ಪಡಿಸಿದ್ದಾರೆ.

 
“ನನ್ನ ಪೋಸ್ಟ್‌ನಲ್ಲಿ ಬೇಜಾವಾಬ್ದಾರಿಯುತ ಪದಗಳ ಆಯ್ಕೆಯಿಂದ ಅನಗತ್ಯ ತೊಡಕನ್ನು ಸೃಷ್ಟಿಸಿದಂತೆ ಕಾಣುತ್ತಿದೆ. ರಿಯಾ ನನ್ನ ಹಳೆಯ ಆತ್ಮೀಯ ಗೆಳತಿ, ನಾನು ಅವಳನ್ನು ಮತ್ತೊಮ್ಮೆ ಭೇಟಿಯಾಗಲು ಬಯಸುವೆ. ಅವಳಿಗೆ ಒಳ್ಳೆಯದನ್ನು ಕೋರುತ್ತೇನೆ,” ಎಂದು ಬರೆದುಕೊಂಡಿದ್ದಾರೆ.

ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣ್ ಅವರ ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಿಯಾ ಭಾಗವಹಿಸಿದ್ದರು. ಪಾರ್ಟಿಯಲ್ಲಿ ರಾಜೀವ್ ಜೊತೆ ರಿಯಾ ಸಲುಗೆಯಿಂದ ಫೋಟೋ ತೆಗೆಸಿಕೊಂಡಿದ್ದರು. ಅದೇ ಫೋಟೋಗಳನ್ನು ಪೋಸ್ಟ್ ಮಾಡಿದ್ದ ರಾಜೀವ್, ಏನೇನೋ ಬರೆದುಕೊಂಡಿದ್ದರು. ಫೋಟೋಗಳು ವೈರಲ್ ಆದ ಮೇಲೆ ಡಿಲೀಟ್ ಮಾಡಿದ್ದಾರೆ.

ಆದರೆ, ರಾಜೀವ್ ಪತ್ನಿ ಸುಸನ್ ಲಕ್ಷ್ಮಣ್ ಮಾತ್ರ ಬರ್ತ್ ಡೇ  ಕಾರ್ಯಕ್ರಮದ ಗ್ರೂಪ್ ಚಿತ್ರಗಳನ್ನು ಡಿಲೀಟ್ ಮಾಡಿಲ್ಲ. ಈ ಚಿತ್ರದಲ್ಲಿ ಅತಿಥಿಗಳಾದ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್ ಜೊತೆ  ರಿಯಾ ಚಕ್ರವರ್ತಿ ಸಹ ಇದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಆತನ ಆತ್ಮಹತ್ಯೆಗೆ  ರಿಯಾ ಕಾರಣ ಮತ್ತು ಆತನ ಹಣ ದೋಚಿದ್ದಾಳೆ ಎಂಬ ಸಂಬಂಧಿಕರ ಆರೋಪದ ಬಳಿಕ ರಿಯಾ ಭಾರೀ ಸುದ್ದಿಯಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಒಂದು ತಿಂಗಳಿಗೂ ಅಧಿಕ ಸಮಯ ಜೈಲಿನಲ್ಲಿ ಕಳೆದಿದ್ದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು