ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರ್‌ ರಾವ್‌ ಬೆಸ್ಟ್‌ ಆ್ಯಕ್ಟರ್‌

rajkumar rao
Last Updated 18 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಪ್ರತಿಷ್ಠಿತ ಸ್ಕ್ರೀನ್‌ ಪ್ರಶಸ್ತಿಗಳಲ್ಲಿ ಈ ಸಲ ಬೆಸ್ಟ್‌ ಆ್ಯಕ್ಟರ್‌ ಪ್ರಶಸ್ತಿ ರಾಜಕುಮಾರ್ ರಾವ್‌ಗೆ ಒಲಿದಿದೆ. ಟ್ರೋಫಿಯನ್ನು ತುಟಿಗೊತ್ತಿ ಸಂತಸ ವ್ಯಕ್ತ ಪಡಿಸುತ್ತಿರುವ ರಾಜಕುಮಾರ್‌ಗೆ ಹೀರೊ ಇಮೇಜ್‌ ಇಲ್ಲವೆಂಬ ಟೀಕೆಯನ್ನು ಎದುರಿಸುತ್ತಲೇ ಬೆಳೆದವರು.

‘ಶಾಹಿದ್ ಚಿತ್ರದಿಂದಲೇ ನಾಯಕ ಪಟ್ಟಕ್ಕೇರಿದ್ದರೂ ಆ ಇಮೇಜ್‌ ನನ್ನದಲ್ಲ. ನಾನೇನಿದ್ದರೂ ಕಲಾವಿದ ಮಾತ್ರ. ಹೀರೊ ನಂಬರ್‌ 1, ಹೀರೊ, ನಾಯಕ ಇಂಥ ಪದಗಳಲ್ಲಿ ನನಗೆ ವಿಶ್ವಾಸವಿಲ್ಲ. ನಾನೊಬ್ಬ ನಟ. ಒಬ್ಬ ಕಲಾವಿದ’ ಎನ್ನುವ ಈ ಕಲಾವಿದ ಟ್ರೇಪ್ಡ್‌, ಬರೇಲಿ ಕಿ ಬರ್ಫಿ, ಬೆಹೆನ್‌ ಹೋಗಿ ತೇರಿ, ಶಾದಿ ಮೇ ಝರೂರ್‌ ಆನಾ, ಕಾಯ್‌ ಪೋಯ್‌ ಛೆ ಮುಂತಾದ ಜನಪ್ರಿಯ ಚಿತ್ರದಲ್ಲಿ ನಟಿಸಿದ ರಾಜಕುಮಾರ್‌ಗೆ ಈ ವರ್ಷ ಬೆಸ್ಟ್‌ ಆ್ಯಕ್ಟರ್‌ ಪ್ರಶಸ್ತಿ ಒಲಿದು ಬಂದಿದೆ. ಕಳೆದ ವರ್ಷ ನ್ಯೂಟನ್‌ ಚಿತ್ರದ ನಟನೆಗಾಗಿ ನಾಮಿನೇಟ್‌ ಆಗಿದ್ದರು. ಆದರೆ ಸಿಕ್ಕಿರಲಿಲ್ಲ. ಈ ವರ್ಷ ಸ್ತ್ರೀ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿ ದೊರೆತಿದೆ.

ಖಾನ್‌ಗಳು ನೇಪಥ್ಯಕ್ಕೆ ಸರಿಯುತ್ತಿರುವಾಗ, ವರ್ಷಕ್ಕೆ ಒಂದೆರಡೇ ಚಿತ್ರಗಳು ಎಂಬ ಸೂತ್ರಕ್ಕೆ ಅಂಟಿಕೊಂಡಿರುವಾಗ, ನವಾಜುದ್ದಿನ್‌ ಸಿದ್ದಿಕಿ, ರಾಜಕುಮಾರ್ ರಾವ್‌, ಸುಶಾಂತ್‌ ಸಿಂಗ್‌ ರಜಪೂತ್‌, ವಿಕ್ಕಿ ಕೌಶಲ್‌ ಎಲ್ಲರೂ ತಮ್ಮ ಅಭಿನಯದ ಛಾಪನ್ನು ಮೂಡಿಸುತ್ತಿದ್ದಾರೆ. ನಿಧಾನವಾಗಿಯಾದರೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸುವಲ್ಲಿ ಈ ಸಾಲಿನ ನಟರು ಯಶಸ್ವಿಯಾಗಿದ್ದಾರೆ.

ಸ್ಕ್ರೀನ್‌ ಅವಾರ್ಡ್‌ಗೆ ಮುತ್ತಿಟ್ಟ ರಾಜಕುಮಾರ್‌ಗೆ ಇದೀಗ ಇನ್ನಷ್ಟು ಹುಮ್ಮಸ್ಸು ಮೂಡಿದೆಯಂತೆ. ಮನೆಯಲ್ಲೊಂದು ಕಪ್ಪು ಸುಂದರಿಯೂ (ಫಿಲಂಫೇರ್ ಅವಾರ್ಡ್‌) ಬರಲಿ ಎನ್ನುವ ಆಸೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT