ಶನಿವಾರ, ಮಾರ್ಚ್ 6, 2021
28 °C

ಗುಟ್ಟಾಗಿ ಮದುವೆಯಾದರೆ ರಾಖಿ ಸಾವಂತ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸದಾ ಒಂದಿಲ್ಲ, ಒಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್‌ ಗುಟ್ಟಾಗಿ ಮದುವೆಯಾಗಿದ್ದಾರಂತೆ! ಇದು ಗಾಳಿ ಸುದ್ದಿಯಲ್ಲ. ಸ್ವತಃ ರಾಖಿಯೇ ಇದನ್ನು ಖಚಿತಪಡಿಸಿದ್ದಾರೆ. ಎನ್‌ಆರ್‌ಐ ಜತೆ ಮದುವೆಯಾಗಿರುವುದಾಗಿ ರಾಖಿ ಹೇಳಿದ್ದಾರೆ. ಎಲ್ಲಿ, ಯಾವಾಗ ಎಂಬ ವಿವರಗಳನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಬ್ರಿಟನ್‌ನಲ್ಲಿರುವ ಅನಿವಾಸಿ ಭಾರತೀಯ ರಿತೇಶ್‌ ಎಂಬುವವರ ಜತೆ ತೀರಾ ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ವೀಸಾ ದೊರೆತ ಕೂಡಲೇ ತಾನೂ ಬ್ರಿಟನ್‌ಗೆ ಹಾರುವುದಾಗಿ ಹೇಳಿದ್ದಾರೆ. 

ಅಂದಹಾಗೆ ಇಬ್ಬರನ್ನೂ ಜೋಡಿ ಮಾಡಿದ್ದು ವಾಟ್ಸ್‌ ಆ್ಯಪ್‌ ಅಂತೆ! ಇಬ್ಬರಲ್ಲಿ ಪ್ರೀತಿ ಅರಳಲು ಕಾರಣವಾದ ಪ್ರಸಂಗವನ್ನು ರಾಖಿ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ‘ಟಿ.ವಿಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ನನ್ನನ್ನು ನೋಡಿದ ರಿತೇಶ್‌ ವಾಟ್ಸ್ ಆ್ಯಪ್‌ ಮೂಲಕ ಸಂದೇಶ ಕಳಿಸಿದ. ಆರಂಭದಲ್ಲಿ ಸ್ನೇಹಿತರಾಗಿದ್ದ ನಾವು ಒಂದೂವರೆ ವರ್ಷದ ನಂತರ ಪ್ರೀತಿಯ ಬಲೆಗೆ ಬಿದ್ದೆವು. ರಿತೇಶ್‌ ನನ್ನ ಗಂಡನಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೆ. ದೇವರು ಅದನ್ನು ನೆರವೇರಿಸಿದ್ದಾನೆ’ ಎಂದು ರಾಖಿ ಸಂತಸವನ್ನು ಹಂಚಿಕೊಂಡಿದ್ದಾರೆ.

ತಾವು ಮದುವೆಯಾಗಿರುವುದನ್ನು ರುಜುವಾತು ಪಡಿಸಲು ಮೆಹಂದಿ, ಬಳೆ, ಕುಂಕುಮವಿಟ್ಟು ವಧುವಿನಂತೆ ಶೃಂಗರಿಸಿಕೊಂಡಿರುವ ಚಿತ್ರವನ್ನು ರಾಖಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಎಲ್ಲಿಯೂ ದಂಪತಿ ಜೋಡಿಯಾಗಿರುವ, ಇಲ್ಲವೇ ಪತಿ ರಿತೇಶ್‌ ಚಿತ್ರವನ್ನು ಹಾಕಿಲ್ಲ. ರಾಖಿ ಕುಚೇಷ್ಟೆ, ತರಲೆ ಸ್ವಭಾವ ತಿಳಿದ ಬಾಲಿವುಡ್‌ ಮಂದಿ ಮದುವೆಯ ಸುದ್ದಿಯನ್ನು ನಂಬಲು ಇನ್ನೂ ಸಿದ್ಧರಿಲ್ಲ! 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು