ಹೇಮಂತ್‌ ರಾವ್ ಜೊತೆ ‘ತೆನಾಲಿ’: ಪತ್ತೆದಾರಿ ಅವತಾರದಲ್ಲಿ ರಕ್ಷಿತ್‌ ಶೆಟ್ಟಿ

7

ಹೇಮಂತ್‌ ರಾವ್ ಜೊತೆ ‘ತೆನಾಲಿ’: ಪತ್ತೆದಾರಿ ಅವತಾರದಲ್ಲಿ ರಕ್ಷಿತ್‌ ಶೆಟ್ಟಿ

Published:
Updated:

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಹೇಮಂತ್‌ ಎಂ. ರಾವ್‌ ಅವರ ಮುಂದಿನ ಸಿನಿಮಾ ತೆನಾಲಿಯಲ್ಲಿ ನಟ ರಕ್ಷಿತ್‌ ಶೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಕ್ಷಿತ್‌ ಅವರೇ ಹೇಳಿಕೊಂಡಿದ್ದಾರೆ.

ಈಗಷ್ಟೇ ಕವಲುದಾರಿ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಗಳಿಗೆ ಎಣಿಸುತ್ತಿರುವ ರಾವ್‌ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ರಕ್ಷಿತ್‌ ಶೆಟ್ಟಿ, ದೇಶದ ಸ್ವಾತಂತ್ರ್ಯ ಕಾಲಘಟ್ಟದ ಕಥೆ ಆಧಾರಿತ ಸಿನಿಮಾ ತೆನಾಲಿಯಲ್ಲಿ ನಟಿಸುವ ಬಗ್ಗೆ ಕಾತರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಈ ಸಿನಿಮಾದಲ್ಲಿ ತಾವು ಸ್ವಾತಂತ್ರ್ಯಪೂರ್ವದ ಪತ್ತೆದಾರಿ ಪಾತ್ರವೊಂದದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿಯೂ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ತಮ್ಮ ಪಾತ್ರಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಇಂಚರ ಹಾಗೂ ವಿನಯ ವಿನ್ಯಾಸ ಮಾಡಿರುವ ವಸ್ತ್ರತೊಟ್ಟು ಹೊಸ ಅವತಾರದಲ್ಲಿ ಕಂಗೊಳಿಸುತ್ತಿದ್ದಾರೆ.

ಈ ಫೋಟೊ ಇದೀಗ ವೈರಲ್‌ ಆಗಿದ್ದು, 28 ಸಾವಿರಕ್ಕೂ ಹೆಚ್ಚು ಲೈಕ್‌ ಗಿಟ್ಟಿಸಿದೆ. 288 ಜನರು ಹಂಚಿಕೊಂಡಿದ್ದು, 617ಕ್ಕೂ ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !