ಭಾನುವಾರ, ಜೂನ್ 26, 2022
26 °C

‘ಸಪ್ತ ಸಾಗರದಾಚೆ ಎಲ್ಲೋ’: ತೂಕ ಹೆಚ್ಚಿಸಿಕೊಂಡ ರಕ್ಷಿತ್‌ ಶೆಟ್ಟಿ ಹೀಗಿದ್ದಾರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೇಮಂತ್‌ ಎಂ.ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟ ರಕ್ಷಿತ್‌ ಶೆಟ್ಟಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ದ್ವಿತೀಯಾರ್ಧದ ಭಾಗಕ್ಕಾಗಿ ರಕ್ಷಿತ್‌ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನುವುದು ಹಳೆಯ ಸುದ್ದಿ. ಆದರೆ ತೂಕ ಹೆಚ್ಚಿಸಿಕೊಂಡ ರಕ್ಷಿತ್‌ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದಕ್ಕೀಗ ಸ್ವತಃ ರಕ್ಷಿತ್‌ ಉತ್ತರಿಸಿದ್ದಾರೆ.

ತಮ್ಮ ಇನ್ನೊಂದು ಶೇಡ್‌ನ ಫೊಟೊವನ್ನು ರಕ್ಷಿತ್‌ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮಕಥೆಯಾಗಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕಾಗಿ ರಕ್ಷಿತ್‌ ಮೊದಲು ತೂಕ ಇಳಿಸಿಕೊಂಡಿದ್ದರು. ಇದೀಗ ದ್ವಿತೀಯಾರ್ಧದ ಭಾಗಕ್ಕೆ 10–15 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಚಿತ್ರದ ಮೊದಲಾರ್ಧದ ಚಿತ್ರೀಕರಣ ಕಳೆದ ಜನವರಿಯಲ್ಲಿ ಪೂರ್ಣಗೊಂಡಿತ್ತು. ಇದಾದ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಸುಮಾರು ಎರಡು ತಿಂಗಳ ಅಂತರ ಇಟ್ಟುಕೊಳ್ಳಲಾಗಿತ್ತು. ಈ ಅವಧಿಯಲ್ಲಿ ರಕ್ಷಿತ್‌ ಶೆಟ್ಟಿ ತೂಕ ಹೆಚ್ಚಿಸಿಕೊಂಡು, ಮತ್ತೆ ಸೆಟ್‌ಗೆ ಮರಳಿದ್ದಾರೆ. ಹೊಸ ಶೇಡ್‌ನಲ್ಲಿ ರಕ್ಷಿತ್‌ ಅವರ ಮುಖಚಹರೆಯೂ ಬದಲಾಗಿದ್ದು, ಲವರ್‌ಬಾಯ್‌ ಲುಕ್‌ನಿಂದ ರಗಡ್‌ ಲುಕ್‌ಗೆ ಬದಲಾಗಿದ್ದಾರೆ. 

ಚಿತ್ರದಲ್ಲಿ ‘ಮನು’ ಎಂಬ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡಿದ್ದು, ಜೋಡಿಯಾಗಿ ನಟಿ ರುಕ್ಮಿಣಿ ವಸಂತ್‌ ‘ಪ್ರಿಯಾ’ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಕಳೆದ ಡಿಸೆಂಬರ್‌ನಲ್ಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ಮೊದಲ ಹಂತದ ಚಿತ್ರೀಕರಣ 21 ದಿನಕ್ಕೇ ಸ್ಥಗಿತಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು