ಗುರುವಾರ , ಏಪ್ರಿಲ್ 22, 2021
26 °C

ರಶ್ಮಿಕಾಗೆ ‘ಪ್ರೌಡ್‌ ಆಫ್‌ ಯು ಗರ್ಲ್‌’ ಎಂದ ರಕ್ಷಿತ್ ಶೆಟ್ಟಿ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುಭಾಷಾ ನಟಿ, ನ್ಯಾಷನಲ್‌ ಕ್ರಶ್‌ ಎಂದೆನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ನಟ ರಕ್ಷಿತ್‌ ಶೆಟ್ಟಿ ಅವರು ಜನ್ಮದಿನದ ಶುಭಾಶಯ ಕೋರಿದ್ದು, ‘ಕಿರಿಕ್‌ ಪಾರ್ಟಿ ಬಳಿಕ, ಬಹುದೂರ ಕ್ರಮಿಸಿರುವೆ. ಕನಸನ್ನು ನಿಜವಾದ ಯೋಧನಂತೆ ಬೆನ್ನಟ್ಟುತ್ತಿರುವೆ. ಪ್ರೌಡ್‌ ಆಫ್‌ ಯು ಗರ್ಲ್‌, ಜನ್ಮದಿನದ ಶುಭಾಶಯಗಳು. ಮತ್ತಷ್ಟು ಯಶಸ್ಸು ನಿನಗೆ ದೊರೆಯಲಿ’ ಎಂದು ಟ್ವೀಟ್‌ ಮೂಲಕ ಹಾರೈಸಿದ್ದಾರೆ. 

ಇದರ ಜೊತೆಗೆ ಕಿರಿಕ್‌ ಪಾರ್ಟಿಯ ಸಾನ್ವಿ ಜೋಸೆಫ್‌ ಪಾತ್ರಕ್ಕೆ ನಡೆದ ಅಡಿಷನ್‌ನ ವಿಡಿಯೊವೊಂದನ್ನು ರಕ್ಷಿತ್‌ ಅಪ್‌ಲೋಡ್‌ ಮಾಡಿದ್ದಾರೆ. ಕಿರಿಕ್‌ ಪಾರ್ಟಿ ಚಿತ್ರದಲ್ಲಿ ಕಾಲೇಜಿನಲ್ಲಿ ನಡೆಯುವ ಸನ್ನಿವೇಶ ಇದಾಗಿದ್ದು, ರಕ್ಷಿತ್‌ ಶೆಟ್ಟಿ ಅವರೇ ರಶ್ಮಿಕಾ ಮುಂದೆ ಕುಳಿತುಕೊಂಡು ದೃಶ್ಯವೊಂದರ ಸಂಭಾಷಣೆ ನಡೆಸುತ್ತಿರುವುದು ಇದರಲ್ಲಿದೆ. ರಶ್ಮಿಕಾ ಅವರ ಮೊದಲ ಚಿತ್ರ ಇದಾಗಿದ್ದ ಕಾರಣ, ಸಂಭಾಷಣೆ ವೇಳೆ ತಪ್ಪು ಮಾಡಿದಾಗ, ಸ್ವತಃ ರಕ್ಷಿತ್‌ ಶೆಟ್ಟಿ ಅವರೇ ರಶ್ಮಿಕಾ ಅವರಿಗೆ ಮುಖಭಾವನೆ, ಸಂಭಾಷಣೆ ಹೇಳಿಕೊಡುತ್ತಿದ್ದ ದೃಶ್ಯವೂ ಇದರಲ್ಲಿದೆ. ಜೊತೆಗೆ ಬಬ್ಲಿ ಬಬ್ಲಿಯಾಗಿ ರಶ್ಮಿಕಾ ನಟಿಸುತ್ತಾ, ಡೈಲಾಗ್‌ ಹೇಳುತ್ತಾ ಖುಷಿಪಡುತ್ತಿರುವುದು ಸೆರೆಯಾಗಿದೆ.

ರಶ್ಮಿಕಾ ಸದ್ಯ ಕನ್ನಡ ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಇವರು ತಮ್ಮ ಸಿನಿಪಯಣವನ್ನು ಆರಂಭಿಸಿದ್ದ ಇವರು, ನಂತರ ಟಾಲಿವುಡ್‌ನಲ್ಲಿ ಮಿಂಚಿದರು. ‘ಗೀತಾ ಗೋವಿಂದಂ’, ‘ದೇವದಾಸ್‌’, ‘ಸರಿಲೇರು ನೀಕ್ವೆವರು’, ‘ಡಿಯರ್‌ ಕಾಮ್ರೇಡ್‌’ ಚಿತ್ರಗಳು ಇವರಿಗೆ ಯಶಸ್ಸು ತಂದುಕೊಟ್ಟವು. ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಾಯಕಿಯಾಗಿ ಮತ್ತೆ ಚಂದನವನಕ್ಕೆ ಕಾಲಿರಿಸಿದ ರಶ್ಮಿಕಾ, ಇದೀಗಗ ಬಾಲಿವುಡ್‌ಗೆ ಜಿಗಿದಿದ್ದಾರೆ. ಬಾಲಿವುಡ್ ಬಿಗ್‌ ಬಿ ಜೊತೆ ತೆರೆ ಹಂಚಿಕೊಳ್ಳಲು ಸಜ್ಜಾಗಿರುವ ರಶ್ಮಿಕಾ ‘ಗುಡ್‌ಬೈ’ನಲ್ಲಿ ಅಮಿತಾಬ್‌ ಬಚ್ಚನ್‌ ಜೊತೆಗೆ ನಟಿಸಲಿದ್ದಾರೆ. ಇದು ಇವರ ಎರಡನೇ ಬಾಲಿವುಡ್‌ ಸಿನಿಮಾ. ನಟ ಸಿದ್ಧಾರ್ಥ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಅಭಿನಯಿಸುತ್ತಿದ್ದು, ಶೂಟಿಂಗ್ ಆರಂಭವಾಗಿದೆ. 1970ರ ಸಮಯದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.

ರಶ್ಮಿಕಾ ಜನ್ಮದಿನಕ್ಕೆ ಲಕ್ಷಾಂತರ ಅಭಿಮಾನಿಗಳು ಹಾಗೂ ನಟ, ನಟಿಯರು ಸಾಮಾಜಿಕ ಜಾಲತಾಣದ ಮುಖಾಂತರ ಶುಭಾಶಯ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು