ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಆರ್‌ಲೈಫ್‌ ವೆಬ್‌ಸೈಟ್‌ಗೆ ರಾಕುಲ್‌ ಅತಿಥಿ ಸಂಪಾದಕಿ

Last Updated 9 ಫೆಬ್ರುವರಿ 2021, 9:45 IST
ಅಕ್ಷರ ಗಾತ್ರ

ಮೆಗಾಸ್ಟಾರ್ ಚಿರಂಜೀವಿ ಸೊಸೆ, ರಾಮ್‌ಚರಣ್‌ ತೇಜ ಅವರ ಪತ್ನಿ ಉಪಾಸನಾ ಅವರು ನಡೆಸುತ್ತಿರುವ ಯುಆರ್‌ಲೈಫ್‌ ಡಾಟ್‌ ಕೋ ಡಾಟ್‌ ಇನ್‌ (URLife.co.in.) ವೆಬ್‌ಸೈಟ್‌ಗೆ ಬಹುಭಾಷಾತಾರೆ ರಾಕುಲ್‌ಪ್ರೀತ್‌ ಅತಿಥಿ ಸಂಪಾದಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಇದೇ ವೆಬ್‌ಸೈಟ್‌ನಲ್ಲಿ ಶೋವೊಂದರಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ, ಅಕ್ಕಿ ರೊಟ್ಟಿ ಬಗ್ಗೆ ಮಾತನಾಡಿದ್ದರು.

ಆರೋಗ್ಯ ಮತ್ತು ಜೀವನ ಶೈಲಿ ಬಗ್ಗೆ ಈ ವೆಬ್‌ಸೈಟ್‌ ಮಾಹಿತಿ ನೀಡುತ್ತಿದೆ. ಆಯ್ದ ಕ್ಷೇತ್ರಗಳ ಪರಿಣತರು ಈ ವೇದಿಕೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ.

ಯಾಕೆ ರಾಕುಲ್‌ ಪ್ರೀತ್‌ ಸಿಂಗ್‌?

ರಾಕುಲ್ ಸದಾ ನಗುಮೊಗದ ಮತ್ತು ಸಕಾರಾತ್ಮಕ ಶಕ್ತಿಯನ್ನು ತಮ್ಮೊಳಗೆ ಇಟ್ಟುಕೊಂಡಿರುವ ನಟಿ. ಕೋಟ್ಯಂತರ ಯುವ ಪೀಳಿಗೆಯ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜತೆಗೆ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದಾರೆ. ಡಜನ್ ಗಟ್ಟಲೇ ಸಿನಿಮಾಗಳಲ್ಲಿ ನಿರತರಾಗಿರುವ ರಾಕುಲ್ ಫಿಟ್ನೆಸ್ ವಿಚಾರವಾಗಿಯೂ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರ ಆ ಆರೋಗ್ಯಕರ ಜೀವನಶೈಲಿಯ ಗುಟ್ಟು ಯುಆರ್‌ಲೈಫ್‌ ಡಾಟ್‌ ಕೋ ಡಾಟ್‌ ಇನ್‌ನಲ್ಲಿಯೂ ಮುಂದುವರಿಯಲಿದೆ ಎನ್ನುತ್ತಾರೆ ಉಪಾಸನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT