ತೆಲುಗು ನಟ ರಾಮ್ ಚರಣ್ ಅವರು ಇತ್ತೀಚೆಗೆ ಭೂಪಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ನಿರೂಪಕರು ಜಸ್ಪ್ರೀತ್ ಬೂಮ್ರಾ ಅವರ ಬಗ್ಗೆ ಕೇಳಿದಾಗ ಅವರು ಒಬ್ಬ ಉತ್ತಮ ಫುಟ್ಬಾಲ್ ಆಟಗಾರ ಎಂದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ರಾಮ್ ಚರಣ್ ಅವರ ನಟನೆಯ ಪೆದ್ದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಬಳಿಕ ಭೂಪಾಲ್ನಲ್ಲಿ ‘ಪೆದ್ದಿ’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟಿ ಜಾಹ್ನವಿ ಕಪೂರ್, ಎ.ಆರ್. ರೆಹಮಾನ್ ಸೇರಿದಂತೆ ಚಿತ್ರತಂಡ ಪ್ರಮುಖರು ಭಾಗಿಯಾಗಿದ್ದರು.

ಇದೇ ವೇಳೆ ನಿರೂಪಕರು ಸಂವಾದದ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರ ಹೆಸರನ್ನು ಹೇಳಿ, ಅವರ ಬಗ್ಗೆ ಎರಡು ಸಾಲಿನಲ್ಲಿ ವಿವರಿಸಲು ಕೇಳಿದರು. ಆಗ ರಾಮ್ ಚರಣ್ ಅವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆಯಾಗಿದ್ದಾರೆ. ಧೋನಿ ಶಾಂತತೆಗೆ ಉದಾಹರಣೆ, ವಿರಾಟ್ ಕೊಹ್ಲಿ ಬೆಂಕಿ ಹಾಗೂ ರೋಹಿತ್ ಶರ್ಮಾ ಎಲ್ಲರಿಗೂ ಗೊತ್ತಿರುವ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಬಳಿಕ ಬೂಮ್ರಾ ಅವರ ಬಗ್ಗೆ ಕೇಳಿದಾಗ, ‘ನಾನು ಫುಟ್ಬಾಲ್ನ ಅತಿ ದೊಡ್ಡ ಅಭಿಮಾನಿ. ಈ ಕ್ರೀಡೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಶುರುವಾಗುತ್ತಿದ್ದಂತೆ ರಾಮ್ ಚರಣ್ ಅವರು ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಬೂಮ್ರಾ ಅವರಿಗೆ ಕ್ಷಮೆಯಾಚಿಸಿದ್ದಾರೆ.

‘ಕೆಲವೊಮ್ಮೆ ನಾನು ಹೆಸರುಗಳನ್ನು ಮರೆತು ಬಿಡುತ್ತೇನೆ. ಹೀಗಾಗಿ ಗೊಂದಲದಲ್ಲಿ ಹೀಗೆ ಹೇಳಿರುವೆ. ನಾನು ಬೂರ್ಮಾ ಅವರಿಗೆ ಕ್ಷಮೆಯಾಚಿಸುತ್ತೇನೆ. ಜನಸಂದಣಿ ಹಾಗೂ ಉತ್ಸಾಹದ ನಡುವೆ ಇಂತಹ ಅಚಾತುರ್ಯ ನಡೆಯುವುದು ಸಹಜ. ಬೂರ್ಮಾ ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ. ಬೌಲಿಂಗ್ ಮೂಲಕ ಬ್ಯಾಟರ್ಗಳನ್ನು ಕಟ್ಟಿಹಾಕುವ ನಿಮ್ಮ ಕಲೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಎನಿಸುತ್ತದೆ. ನಾನು ಕೂಡ ನಿಮ್ಮ ದೊಡ್ಡ ಅಭಿಮಾನಿ’ ಎಂದು ಬರೆದುಕೊಂಡಿದ್ದಾರೆ.

ಬಹು ನಿರೀಕ್ಷಿತ ಚಿತ್ರ ‘ಪೆದ್ದಿ’ ಸಿನಿಮಾವು ಜೂನ್ 4ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಜಾಹ್ನವ ಕಪೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.