ಸಾಮಾನ್ಯವಾಗಿ ಸ್ಟಾರ್ ನಟರು ಎಂದಮೇಲೆ ಬಾಡಿಗಾರ್ಡ್ (ಅಂಗರಕ್ಷಕ) ಇದ್ದೇ ಇರುತ್ತಾರೆ. ಕೆಲವೊಮ್ಮೆ ಅವರ ನಡೆ, ಹಾವ–ಭಾವದಿಂದಲೇ ಜನರ ಮನಸ್ಸು ಗೆದ್ದು ಜನಪ್ರಿಯಗೊಳ್ಳುತ್ತಾರೆ. ಸದ್ಯ ನಟ ರಾಮ್ ಚರಣ್ ತಮ್ಮ ‘ಪೆದ್ದಿ’ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ವಿವಿಧ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರ ಬಾಡಿಗಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಅವರ ಹೆಸರು ಕೆವಿನ್ ಕುಂತಾ. ರಾಮ್ಚರಣ್ ಅವರು ಎಲ್ಲೇ ಹೋದರೂ ಅವರೊಂದಿಗೆ ಭದ್ರತೆಗೆ ತಪ್ಪದೇ ಹೋಗುವ ವೈಯಕ್ತಿಕ ಅಂಗರಕ್ಷಕ ಇವರು. ಕೆವಿನ್ ಅವರು ಜವಾಬ್ದಾರಿಯಿಂದ ರಾಮ್ಚರಣ್ ಅವರನ್ನು ನೋಡಿಕೊಳ್ಳುವುದು, ಅಭಿಮಾನಿಗಳ ಬಳಿ ಸಂಯಮದಿಂದ ವರ್ತಿಸುವುದು, ಅವರ ದೇಹದಾರ್ಢ್ಯತೆ ಎಲ್ಲವೂ ನೆಟ್ಟಿಗರನ್ನು ಅಕರ್ಷಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆವಿನ್ ಅವರ ಸಾಕಷ್ಟು ವಿಡಿಯೊಗಳು ಹರಿದಾಡುತ್ತಿವೆ. ಕಪ್ಪು ಮೈಬಣ್ಣ, ತರಹೇವಾರಿ ಹೇರ್ಸ್ಟೈಲ್ಗಳು, ಕಪ್ಪು ಬಣ್ಣದ ಸೂಟ್ ಧರಿಸಿ ರಾಮ್ಚರಣ್ ಜತೆ ಬರುವ ಇವರನ್ನು ನೋಡಿ ಹಲವರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಂತೂ ರಾಮ್ಚರಣ್ ನೋಡಲು ಬಂದ ಅಭಿಮಾನಿಯೊಬ್ಬರು ‘ಐ ಲವ್ ಯೂ ಕೆವಿನ್’ ಎಂದು ಬಿಟ್ಟಿದ್ದಾರೆ. ಈ ವಿಡಿಯೊ ನೋಡಿದವರು ಕೆಲ ದಿನಗಳಲ್ಲಿ ಕೆವಿನ್ ಅವರ ಸುರಕ್ಷತೆಗೇ ಭದ್ರತಾ ಸಿಬ್ಬಂದಿ ಬೇಕಾಗಬಹುದು ಎಂದು ತಮಾಷೆ ಮಾಡಿದ್ದಾರೆ.

ಕೆವಿನ್ ವಿಡಿಯೊ ನೋಡಿದವರು ಅವರು ಯಾರು, ಎಲ್ಲಿಯವರು ಅವರ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ.

ಕೆವಿನ್ ಕುಂತಾ ಯಾರು?

ಕೆವಿನ್ ಕುಂತಾ ಅವರ ನಿಜವಾದ ಹೆಸರು ಅಬ್ದೌ ಕದಿರ್ ಸೋವೆ. ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾ ಮೂಲದವರು. ಪ್ರಸ್ತುತ ಇಟಲಿಯ ಫ್ಲಾರೆನ್ಸ್ನಲ್ಲಿ ನೆಲೆಸಿದ್ದಾರೆ. ಟ್ಯಾಪೋಲಜಿ ವೆಬ್ಸೈಟ್ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ 1998ರಲ್ಲಿ ಗ್ಯಾಂಬಿಯಾದಲ್ಲಿ ಜನಿಸಿದ ಅವರು ಕುಸ್ತಿಪಟುವೂ ಹೌದು.

ಕೆವಿನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಅವರು, ತಮ್ಮನ್ನು ಅಂತರರಾಷ್ಟ್ರೀಯ ವೃತ್ತಿಪರ ಮಿಶ್ರ ಸಮರ ಕಲೆಗಳ (Mixed Martial Arts) ಫೈಟರ್ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾದಲ್ಲಿ ಇವರಿಗೆ 2 ಲಕ್ಷಕ್ಕೂ ಹೆಚ್ಚು ಜನ ಫಾಲೋವರ್ಸ್ ಇದ್ದಾರೆ.

ಕೆವಿನ್ ಬಗ್ಗೆ ರಾಮ್ಚರಣ್ ಮಾತು...

ಕೆವಿನ್ ಬಗ್ಗೆ ಜನರು ಕುತೂಹಲದಿಂದ ಗಮನಿಸುತ್ತಿದ್ದ ಬಗ್ಗೆ ಪ್ರಚಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಮ್ಚರಣ್, ‘ನೀವು ಅವನನ್ನು ಎಷ್ಟು ಜನಪ್ರಿಯ ವ್ಯಕ್ತಿಯನ್ನಾಗಿ ಮಾಡಿದ್ದೀರಿ ಎಂದರೆ ನಾನು ಅವನನ್ನು ಈಗ ಹೊರಗೇ ಬಿಡುವುದಿಲ್ಲ’ ಎಂದಿದ್ದಾರೆ.

‘ಕಳೆದ ನಾಲ್ಕು ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಕೆವಿನ್ ಒಡನಾಟದಲ್ಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಕುಟುಂಬ ಸದಸ್ಯರೊಂದಿಗೆ ಇರುತ್ತಾರೆ. ನನ್ನ ಮತ್ತು ಪತ್ನಿ, ಮಕ್ಕಳ ರಕ್ಷಣೆಗೆ ಕೆವಿನ್ ಇರುತ್ತಾರೆ’ ಎನ್ನುವ ವಿಚಾರವನ್ನೂ ರಾಮ್ಚರಣ್ ಹಂಚಿಕೊಂಡಿದ್ದಾರೆ.

ಕೆವಿನ್ ಎಷ್ಟು ದುಡಿಯುತ್ತಾರೆ?

ಸ್ಟಾರ್ ನಟರಿಗೆ ಭದ್ರತೆ ಕೊಡುವುದು ಎಂದರೆ ಸಾಮಾನ್ಯ ಕೆಲಸವಲ್ಲ. ಪ್ರತಿ ಕ್ಷಣ ಎಚ್ಚರವಾಗಿದ್ದು, ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಅಂಗರಕ್ಷಕರು ಎಷ್ಟು ದುಡಿಯುತ್ತಾರೆ ಎನ್ನುವ ಪ್ರಶ್ನೆ ಕಾಡದೇ ಇರದು.

ಕೆವಿನ್ ದಿನಕ್ಕೆ ₹2 ರಿಂದ ₹4 ಲಕ್ಷದವರೆಗೆ ಗಳಿಸುತ್ತಾರೆ ಎಂದು ವಿವಿಧ ವರದಿಗಳನ್ನು ಆಧರಿಸಿ ‘ಮಿಂಟ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇತ್ತೀಚೆಗೆ ರಾಮ್ಚರಣ್ ಮತ್ತು ನಟಿ ಜಾಹ್ನವಿ ಕಪೂರ್ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅಭಿಮಾನಿಯೊಬ್ಬ ರಾಮ್ಚರಣ್ ಅವರತ್ತ ನುಗ್ಗಿ ಬರುವುದನ್ನು ತಡೆದ ಕೆವಿನ್ ಅವರ ಜಾಣತನಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.