ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿ 'ಆರ್‌ಆರ್‌ಆರ್‌‘ ನಟ ರಾಮ್‌ ಚರಣ್‌

Last Updated 27 ಮಾರ್ಚ್ 2022, 10:37 IST
ಅಕ್ಷರ ಗಾತ್ರ

ತೆಲುಗು ನಟ ರಾಮ್ ಚರಣ್ ಇಂದು (ಮಾ.27) 37ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿದ್ದಾರೆ. ಅವರು ಅಭಿನಯದ ‘ಆರ್‌ಆರ್‌ಆರ್‌‘ ಸಿನಿಮಾ ಭರ್ಜರಿ ಯಶಸ್ಸಿನತ್ತ ಮುನ್ನುಗುತ್ತಿದೆ.

ತೆಲುಗು ಚಿತ್ರರಂಗ ಸೇರಿದಂತೆ ಬಾಲಿವುಡ್‌ನ ಸಿನಿ ತಾರೆಯರು, ಅಭಿಮಾನಿಗಳು ರಾಮ್‌ ಚರಣ್‌ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ರಾಮ್‌ ಚರಣ್‌ ಕೂಡಅಭಿಮಾನಿಗಳಿಗೆ, ಆತ್ಮೀಯರಿಗೆ, ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ರಾಮ್‌ ಚರಣ್‌ ಟ್ವಿಟರ್‌ ಮೂಲಕ ಕನ್ನಡ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ‘ಆರ್‌ಆರ್‌ಆರ್‌ ಸಿನಿಮಾವನ್ನು ಅತ್ಯಂತ ಉತ್ಸಾಹದಿಂದ ಚಿತ್ರಮಂದಿರಗಳಲ್ಲಿ ವೀಕ್ಷಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಅದ್ಭುತ ಜನ್ಮದಿನದ ಉಡುಗೊರೆಯನ್ನು ನಾನು ನಮ್ರತೆಯಿಂದ ಸ್ವೀಕರಿಸುತ್ತೇನೆ‘ ಎಂದು ರಾಮ್ ಚರಣ್ ಹೇಳಿದ್ದಾರೆ.

— Ram Charan (@AlwaysRamCharan) March 27, 2022

>

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯತ್ತ ಸಾಗಿದೆ. ಆರಂಭದ ದಿನವೇ ಚಿತ್ರ ₹236 ಕೋಟಿ ಗಳಿಕೆ ಕಂಡಿದೆ ಎಂದು ವರದಿಗಳು ಹೇಳಿವೆ.

ಜ್ಯೂ. ಎನ್‌ಟಿಆರ್, ರಾಮ್‌ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ತಾರಾಗಣವನ್ನು ಒಳಗೊಂಡ ಆರ್‌ಆರ್‌ಆರ್‌ ಚಿತ್ರ, ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT