ಸೋಮವಾರ, ನವೆಂಬರ್ 30, 2020
27 °C

ಗ್ರೀನ್‌ ಇಂಡಿಯಾ ಸವಾಲಿನಲ್ಲಿ ಸಸಿ ನೆಟ್ಟ ರಾಮ್‌ಚರಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗು ನಟ ರಾಮಚರಣ್‌‌ ಅವರು ‘ಗ್ರೀನ್‌ ಇಂಡಿಯಾʼ ಸವಾಲಿನಲ್ಲಿ ಭಾಗವಹಿಸಿದ್ದಾರೆ. ಅವರು ಗಿಡ ನೆಟ್ಟು ಈ ಅಭಿಯಾನವನ್ನು ಬೆಂಬಲಿಸಿರುವ ಚಿತ್ರ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಸಮಂತಾ ಅಕ್ಕಿನೇನಿ ಅವರು ಕೂಡಾ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಓಹ್‌ ಬೇಬಿ ಚಿತ್ರದ ಬೆಡಗಿ ಸಮಂತಾ ತನ್ನ ತಂದೆಯ ಜೊತೆಗೂಡಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. 

ನಟಿಯರಾದ ಕೀರ್ತಿ ಸುರೇಶ್‌, ರಶ್ಮಿಕಾ ಮಂದಣ್ಣ ಮತ್ತು ಶಿಲ್ಪಾ ರೆಡ್ಡಿ ಕೂಡಾ ಭಾಗವಹಿಸಿದ್ದಾರೆ. ಈ ‘ಗ್ರೀನ್‌ ಇಂಡಿಯಾ ಚಾಲೆಂಜ್‌ಗೆ’ ನಾಮ ನಿರ್ದೇಶನ ನೀಡುವಲ್ಲಿಯೂ ಇವರು ಭಾಗವಹಿಸಿದ್ದಾರೆ. ಕಲಾವಿದರು, ಚಿತ್ರರಂಗದ ಗಣ್ಯರು ಕೂಡಾ ತಮ್ಮ ಆಪ್ತರನ್ನು ನಾಮನಿರ್ದೇಶನ ಮಾಡಿದರು.   

ಆರ್‌ಆರ್‌ಆರ್ ಚಿತ್ರದ ನಟ ಪ್ರಭಾಸ್ ಅವರು ಈ ಅಭಿಯಾನದಲ್ಲಿ ಮೂರು ಸಸಿಗಳನ್ನು ನೆಟ್ಟರು. ಎಸ್.ಎಸ್.ರಾಜಮೌಳಿ, ಬಾಲಿವುಡ್ ನಟ ಆಲಿಯಾ ಭಟ್ ಮತ್ತು ಆರ್.ಆರ್.ಆರ್ ಅವರ  ತಂಡವನ್ನು ರಾಮಚರಣ್ ಅವರು ನಾಮನಿರ್ದೇಶನ ಮಾಡಿದರು. 

ತೆಲಂಗಾಣ ಸಂಸದ ಸಂತೋಷ್‌ ಕುಮಾರ್‌ ಅವರು ಈ ಅಭಿಯಾನವನ್ನು ಆರಂಭಿಸಿದ್ದರು. ಪ್ರತಿಯೊಬ್ಬರೂ ಮೂರು ಸಸಿಗಳನ್ನು ನೆಡಬೇಕು ಎಂದು ರಾಮ್‌ಚರಣ್‌ ಕೋರಿದ್ದಾರೆ.

ಇದುವರೆಗೆ ನಾಗಾರ್ಜುನ ಅಕ್ಕಿನೇನಿ, ಸಮಂತಾ, ರಾಶಿ ಖನ್ನಾ ಮತ್ತು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸವಾಲಿನ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು