ನವದೆಹಲಿ: ತೆಲುಗು ನಟ ರಾಮ್ ಚರಣ್ ತಮ್ಮ ಮುಂಬರುವ ಬಹುನಿರೀಕ್ಷಿತ 'ಪೆದ್ದಿ' ಚಿತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತ, ಕ್ರೀಡೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಮೂಡಿಬರುತ್ತಿರುವ ವೈವಿಧ್ಯಮಯ ಕಥೆಗಳ ಬಗ್ಗೆ ಪ್ರಧಾನಿ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು 'ಪೆದ್ದಿ' ಚಿತ್ರದ ಮುಖ್ಯ ಪರಿಕಲ್ಪನೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸಿದ್ದರು ಎಂದು ರಾಮ್ ಚರಣ್ ಸ್ಮರಿಸಿದ್ದಾರೆ.
.ನಿರೀಕ್ಷೆಗಿಂತ ಕಡಿಮೆ ಮಳೆ: ಬೆಳೆ ಆಯ್ಕೆಯಲ್ಲಿ ಎಚ್ಚರ ವಹಿಸುವಂತೆ ರೈತರಿಗೆ ಸಲಹೆ.ಆಸ್ತಿ ವಿವಾದ: ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ 6 ಜನರ ಕೊಲೆ.
ವಿಕಸಿತ ಭಾರತ ಮತ್ತು ಗ್ರಾಮೀಣ ಸಬಲೀಕರಣವೇ ಚಿತ್ರದ ಜೀವಾಳ

ನಾನು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ಅವರು 'ಪೆದ್ದಿ' ಚಿತ್ರದ ಕಥಾಹಂದರ ಏನೆಂದು ಕೇಳಿದರು. ಅದಕ್ಕೆ ನಾನು, 'ಸರ್, ಇದು ವಿಕಸಿತ ಭಾರತದ ಕನಸು ಮತ್ತು ನಮ್ಮ ಹಳ್ಳಿಗಳ ಸಬಲೀಕರಣದ ಕುರಿತಾದ ಕಥೆ. ಹಳ್ಳಿಗಳನ್ನು ಸಶಕ್ತಗೊಳಿಸುವ ಪರಿಕಲ್ಪನೆಯನ್ನೇ ಈ ಸಿನಿಮಾ ಒಳಗೊಂಡಿದೆ' ಎಂದು ಉತ್ತರಿಸಿದೆ' ಎಂದ ನಟ ರಾಮ್ ಚರಣ್ ವಿವರಿಸಿದ್ದಾರೆ.

ಪಶ್ಚಿಮ ಬಂಗಾಳದ ಯಶೋಗಾಥೆ ಹಂಚಿಕೊಂಡ ಪ್ರಧಾನಿ

ರಾಮ್ ಚರಣ್ ಅವರ ಮಾತುಗಳನ್ನು ಕೇಳಿದ ಪ್ರಧಾನಿ ಮೋದಿ, ಕ್ರೀಡೆಯು ಒಂದು ಇಡೀ ಸಮುದಾಯದ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಪಶ್ಚಿಮ ಬಂಗಾಳದ ಉದಾಹರಣೆಯೊಂದನ್ನು ಹಂಚಿಕೊಂಡಿದ್ದರು.

ದಶಕಗಳ ಹಿಂದೆ ಪಶ್ಚಿಮ ಬಂಗಾಳದ ಸಣ್ಣ ಹಳ್ಳಿಯೊಂದರ ಫುಟ್ಬಾಲ್ ಆಟಗಾರ ಭಾರತವನ್ನು ಪ್ರತಿನಿಧಿಸಿದ್ದರು. ಅವರ ಸ್ಫೂರ್ತಿಯಿಂದಾಗಿ ಇಂದು ಅದೇ ಹಳ್ಳಿಯ 85ಕ್ಕೂ ಹೆಚ್ಚು ಯುವಕರು ಫುಟ್ಬಾಲ್ ಆಡುತ್ತಿದ್ದಾರೆ ಎಂಬ ಸ್ಪೂರ್ತಿದಾಯಕ ಕಥೆಯನ್ನು ಮೋದಿ ನನಗೆ ತಿಳಿಸಿದರು ಎಂದು ರಾಮ್ ಚರಣ್ ಹೇಳಿದ್ದಾರೆ.
.ವಂದೇ ಮಾತರಂ ಪೂರ್ಣ ಹಾಡುವುದು ಕಡ್ಡಾಯವಲ್ಲ: ಕೇರಳಂ ಸಿಎಂ ಸತೀಶನ್.ಮಾಸ್ ಲೀಡರ್ ಸಿದ್ದರಾಮಯ್ಯ, ಬಂಡೆ ಡಿಕೆಶಿ ಕುರಿತು ಓದಬೇಕಾದ ಸುದ್ದಿಗಳಿವು...
ರಾಮ್ ಚರಣ್ ಅವರು ಕಳೆದ ವರ್ಷ ತಮ್ಮ ಪತ್ನಿ ಉಪಾಸನಾ ಅವರೊಂದಿಗೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.

ಸಿನಿಮಾಗಳಲ್ಲಿ ಹೆಚ್ಚುತ್ತಿದೆ ಗ್ರಾಮೀಣ ಸೊಗಡು

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹಳ್ಳಿ ಸಂಸ್ಕೃತಿಗೆ ಹತ್ತಿರವಾಗಿರುತ್ತಿವೆ ಎಂದು ರಾಮ್ ಚರಣ್ ಅಭಿಪ್ರಾಯಪಟ್ಟಿದ್ದಾರೆ.

ಪೆದ್ದಿ ಚಿತ್ರಕ್ಕೆ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್ ಜತೆ ನಾಯಕಿ ಆಗಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಿವರಾಜ್ಕುಮಾರ್, ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತವಿದೆ. ಈ ಚಿತ್ರ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
.VIDEO: ಆಟೊ ಚಾಲಕರ ಸಮವಸ್ತ್ರ ಧರಿಸಿ ಸಂವಾದ ನಡೆಸಿದ ರಾಹುಲ್ ಗಾಂಧಿ.ನೀಟ್-UG ಪತ್ರಿಕೆ ಸೋರಿಕೆ: ಯುವಕರನ್ನು ನಿರಾಶೆಗೊಳಿಸಬಾರದು,NTAಗೆ ಸುಪ್ರೀಂ ತರಾಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.