ತೆಲುಗು ನಟ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರ ಟ್ರೇಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಚಿತ್ರದಲ್ಲಿ ರಾಮ್ ಚರಣ್ ಅವರ ಪೈಲ್ವಾನ್ ಪಾತ್ರದ ಬಗ್ಗೆ ಚಿತ್ರತಂಡ ಈಗಾಗಲೇ ಅನಾವರಣ ಮಾಡಿತ್ತು. ಆದರೆ, ಟ್ರೇಲರ್ನಲ್ಲಿ ಮೂರು ಅವತಾರಗಳನ್ನು ಪರಿಚಯಿಸಿ ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಟ್ರೇಲರ್ನಲ್ಲಿ ಜಾಹ್ನವಿ ಕಪೂರ್ ಅವರು ಹಳ್ಳಿ ಸೊಗಡಿನ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಗರಡಿಯ ಮುಖ್ಯಸ್ಥ ‘ಗೌರ್ನಾಯ್ಡು’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಗಪತಿ ಬಾಬು, ದಿವ್ಯೆಂದು ಶರ್ಮಾ, ಬೊಮನ್ ಇರಾನಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಎ.ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನವಿದ್ದು, ಆರ್. ರತ್ನವೇಲು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.