ಬೆಂಗಳೂರಿನಲ್ಲಿ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ರಾಮ್ಚರಣ್, ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೆದ್ದಿ' ಚಿತ್ರದ ಪ್ರಚಾರ ಆರಂಭಿಸಿಲಾಗಿದೆ. ಈ ನಿಟ್ಟಿನಲ್ಲಿ ಈ ಚಿತ್ರದ ಚಿತ್ರತಂಡ ಮೇ25 ರಂದು ಬೆಂಗಳೂರಿಗೆ ಆಗಮಿಸಿದ್ದರು.

ಈ ಚಿತ್ರದ ಅಭಿಪ್ರಾಯ ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್, ‘ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು. ನನ್ನ ತಮ್ಮ ಪುನೀತ್ ಹೇಗೋ ರಾಮ್ ಚರಣ್ ಕೂಡ ಹಾಗೆ’ ಎಂದಿದ್ದಾರೆ.

‘ಶಿವಣ್ಣನಲ್ಲಿ ತಂದೆ, ಸಹೋದರ, ಗೆಳೆಯ, ಉತ್ತಮ ನಟನನ್ನು ನೋಡಬಹುದು. ಅವರು ಭಾರತೀಯ ಸಿನಿಮಾ ರಂಗಕ್ಕೆ ಶ್ರೇಷ್ಠ ವ್ಯಕ್ತಿ. ಕನ್ನಡ ಚಿತ್ರರಂಗದ ಚಕ್ರವರ್ತಿ. ನೀವು ‘ಪೆದ್ದಿ’ ಚಿತ್ರದಲ್ಲಿ ನಟಿಸಿರುವುದು ನಮ್ಮ ಹೆಮ್ಮೆ‘ ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.

‘ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ನನಗೆ ಕನ್ನಡ ಅಷ್ಟು ಗೊತ್ತಿಲ್ಲ. ಆದರೆ ಮುಂದಿನ ಸರಿ ಬೆಂಗಳೂರಿಗೆ ಬಂದಾಗ ಕನ್ನಡದಲ್ಲೇ ಮಾತನಾಡುವೆ’ ಎಂದು ಅವರು ಹೇಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಈ ಚಿತ್ರದ ಪ್ರಚಾರದ ವೇಳೆ ಬಾಲಿವುಡ್ ನಟಿ ಜಾಹ್ನವಿ ಅವರು ‘ನನಗೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ನಿಮ್ಮನ್ನು ನೋಡಿ ಸಂತೋಷವಾಯಿತು’ ಎಂದಿರುವ ವಿಡಿಯೊಗಳು ಪ್ರೇಕ್ಷಕರ ಗಮನ ಸೆಳೆದಿವೆ.

ಶಿವರಾಜ್ಕುಮಾರ್ ಅವರು ‘ಗೌರ್ನಾಯ್ಡು’ ಆಗಿ ಹಾಗೂ ರಾಮ್ ಚರಣ್ ಅವರು ‘ಪೈಲ್ವಾನ್‘ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಜೂನ್ 4 ರಂದು ಬಿಡುಗಡೆಯಾಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.