ಸರ್ಕಾರಿ ಜಾಗದಲ್ಲಿ ಚಿತ್ರದ ಪೋಸ್ಟರ್ ಅಂಟಿಸಿದ್ದಕ್ಕೆ ರಾಮ್ ಗೋಪಾಲ್ ವರ್ಮಾಗೆ ದಂಡ

ಹೈದರಾಬಾದ್: ಬಿಡುಗಡೆಗೆ ಸಜ್ಜಾಗಿರುವ ‘ಪವರ್ ಸ್ಟಾರ್’ ಚಲನಚಿತ್ರದ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿದ ಕಾರಣಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯ (ಜಿಎಚ್‌ಎಂಸಿ) ಜಾಗೃತ ದಳ ದಂಡ ವಿಧಿಸಿದೆ.
ಜಿಎಚ್‌ಎಂಸಿ ಕಾಯ್ದೆಯನ್ನು ಉಲ್ಲಂಘಿಸಿರುವ ನಿರ್ದೇಶಕ, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸರ್ಕಾರದ ಆಸ್ತಿಯನ್ನು ಬಳಸಿಕೊಂಡಿದ್ದಾರೆ ಎಂದು ಪಾಲಿಕೆ ಹೇಳಿದೆ.
‘ಪೋಸ್ಟರ್ ಅಂಟಿಸಿದ ಕಾರಣಕ್ಕಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಜಿಎಚ್‌ಎಂಸಿಯ ಸೆಕ್ಷನ್ 402, 421 ಮತ್ತು 1955ರ ಜಿಎಚ್‌ಎಂಸಿಯ ಕಾಯ್ದೆಯ 674, 596, 487ರ ಅಡಿಯಲ್ಲಿ ಜಿಎಚ್‌ಎಂಸಿ ಜಾಗೃತ ದಳ ಹಾಗೂ ವಿಪತ್ತು ನಿರ್ವಹಣೆ ನಿರ್ದೇಶಕರು ₹ 4000 ದಂಡ ವಿಧಿಸಿದ್ದಾರೆ’ ಎಂದು ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.