‘ಲಡ್ಕಿ‘ ಚಿತ್ರವನ್ನು ಬ್ರೂಸ್ ಲೀಗೆ ಅರ್ಪಿಸಿದ ರಾಮ್ ಗೋಪಾಲ್ ವರ್ಮಾ

ಮುಂಬೈ: ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ‘ಲಡ್ಕಿ‘ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸಮರ ಕಲೆಗೆ ಸಂಬಂಧಿಸಿದ ಕಥಾಹಂದರವನ್ನು ಒಳಗೊಂಡಿರುವ ಚಿತ್ರವು ತನ್ನ ಟೀಸರ್ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಚಿತ್ರದ ಕುರಿತು ಸುದ್ದಿಸಂಸ್ಥೆ ಐಎಎನ್‌ಎಸ್ ಜೊತೆ ಮಾತನಾಡಿರುವ ಅವರು, ‘ನನ್ನ ವೃತ್ತಿ ಬದುಕಿನಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಿದು. ನನ್ನನ್ನು ಶಾಶ್ವತವಾಗಿ ಆಕರ್ಷಿಸಿದ ನಟ ಬ್ರೂಸ್ ಲೀ ಅವರಿಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದೇನೆ‘ ಎಂದು ತಿಳಿಸಿದ್ದಾರೆ.
ಪುರುಷನಲ್ಲಿರುವ ಚೈತನ್ಯವನ್ನು ನಾನು 'ಲಡ್ಕಿ'ಯಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ ಎಂದೂ ವರ್ಮಾ ಹೇಳಿದ್ದಾರೆ.
ಎ ಬಿಗ್ ಪೀಪಲ್ ಮತ್ತು ಟೈಗರ್ ಕಂಪನಿ ಬ್ಯಾನರ್‌ಗಳಡಿ ಜಿಂಗ್ ಲಿಯು, ನರೇಶ್ ಕುಮಾರ್ ಟಿ. ಮತ್ತು ಶ್ರೀಧರ್ ಟಿ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.