ಇವರು ಯಾರೆಂದು ಗುರುತಿಸಿ: 'ಕಮ್ಮಾ ರಾಜ್ಯಂಲೋ ಕಡಪ ರೆಡ್ಲು' ಟಿಕೆಟ್ ಪಡೆಯಿರಿ

ವಿವಾದಗಳಿಂದಲೇ ಹೆಚ್ಚು ಜನಪ್ರಿಯವಾದ ತೆಲುಗಿನ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ಭಾರಿ ಸಂಚಲನ ಮೂಡಿಸಿದ್ದ ‘ಕಮ್ಮಾ ರಾಜ್ಯಂಲೋ ಕಡಪ ರೆಡ್ಲು’ ಸಿನಿಮಾ ಇಂದು ತೆರೆಕಂಡಿದೆ.
ಇದನ್ನೂ ಓದಿ: ರಾಮ್‌ಗೋಪಾಲ್ ವರ್ಮಾ ಮಾಡಿರುವ ‘ಮೆಗಾ ಫ್ಯಾಮಿಲಿ‘ ಟ್ವೀಟ್ ಹಿಂದಿನ ಮರ್ಮವೇನು?
ಹೆಚ್ಚು ಜನ ಸಿನಿಮಾ ವೀಕ್ಷಿಸಲಿ ಎನ್ನುವ ಆಶಯದಲ್ಲಿ ಆರ್‌ಜಿವಿ ಉಚಿತ ಸಿನಿಮಾ ಟಿಕೆಟ್ ನೀಡುತ್ತಿದ್ದಾರೆ. ಆದರೆ, ಅದಕ್ಕೊಂದು ಷರತ್ತು ಇದೆ. ಆಂಧ್ರಪ್ರದೇಶದ ರಾಜಕಾರಣಿಗಳಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿರುವ ವರ್ಮಾ, ಈ ದೃಶ್ಯದಲ್ಲಿರುವವರನ್ನು ಗುರುತಿಸಿ ಕಮ್ಮ ರಾಜ್ಯಂ ಕಡಪ ರೆಡ್ಡಿಲು ಸಿನಿಮಾದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ.
This is a scene from not a scene from KAMMA RAJYAMlO KADAPA REDDLU #KRKR pic.twitter.com/9BSzbSTrFO
— Ram Gopal Varma (@RGVzoomin) November 28, 2019
92 ಸಾವಿರ ಮಂದಿ ಈ ವಿಡಿಯೊ ವೀಕ್ಷಿಸಿದ್ದು, ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸುಮಾರು 800 ಮಂದಿ ಕಮೆಂಟ್ ಮಾಡಿದ್ದು, ವಿಡಿಯೊದಲ್ಲಿರುವವರನ್ನು ಗುರುತಿಸಿ ಉಚಿತ ಟಿಕೆಟ್ ಪಡೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಅನೇಕರು ವ್ಯಂಗ್ಯದ ಟ್ವೀಟ್ ಮೂಲಕ ಆರ್‌ಜಿವಿ ಕಾಲೆಳೆದಿದ್ದಾರೆ. 600 ಮಂದಿ ಇದನ್ನು ರಿಟ್ವೀಟ್ ಮಾಡಿದ್ದು, 6200 ಮಂದಿ ಲೈಕ್ ಮಾಡಿದ್ದಾರೆ.
ಆಂಧ್ರ ರಾಜಕೀಯದ ಬಗ್ಗೆ ಆರ್‌ಜಿವಿ ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ. ಅವರು ದೊಡ್ಡ ಯಶಸ್ಸನ್ನು ಕಂಡು ಸಾಕಷ್ಟು ದಿನಗಳೇ ಆಗಿವೆ. 'ಕಮ್ಮಾ ರಾಜ್ಯಂಲೋ ಕಡಪ ರೆಡ್ಲು' ಚಿತ್ರದಿಂದಾದರೂ ಅವರಿಗೆ ಗೆಲುವು ದಕ್ಕುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.