ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಯೇಟರ್‌ಗೆ ರಾಮನ ಸವಾರಿ

Last Updated 30 ಜನವರಿ 2020, 19:30 IST
ಅಕ್ಷರ ಗಾತ್ರ

‘ರಾಮನ ಸವಾರಿ’ –ಕೆ. ಶಿವರುದ್ರಯ್ಯ ನಿರ್ದೇಶನದ ಮಕ್ಕಳ ಚಿತ್ರ. ಇದಕ್ಕೆ 2018ನೇ ಸಾಲಿನ ಎರಡನೇ ಅತ್ಯುತ್ತಮ ರಾಜ್ಯ ಪ್ರಶಸ್ತಿಯೂ ಸಿಕ್ಕಿದೆ. ಇದು ಸಾಹಿತಿ ಕೆ. ಸದಾಶಿವ ಅವರ ಕಥೆ ಆಧರಿಸಿದ ಸಿನಿಮಾ.

ರಾಮ ಪುಟ್ಟ ಹುಡುಗ. ಮೌಥಾರ್ಗನ್‌ ನುಡಿಸುತ್ತಾ ಪ್ರಕೃತಿಯೊಂದಿಗೆ ಆಟವಾಡುವು ದೆಂದರೆ ಆತನಿಗೆ ಎಲ್ಲಿಲ್ಲದ ಆನಂದ. ಕೌಟುಂಬಿಕ ಸಮಸ್ಯೆಯಿಂದ ಆತನ ಅಪ್ಪ–ಅಮ್ಮ ಪರಸ್ಪರ ಬೇರೆಯಾಗುತ್ತಾರೆ. ಕೊನೆಗೆ, ರಾಮನಿಗಾಗಿ ಅವರು ಹೇಗೆ ಒಂದಾಗುತ್ತಾರೆ ಎನ್ನುವುದೇ ಈ ಚಿತ್ರದ ಕಥಾಹಂದರ.ಸಾಹಿತಿ ಗಿರೀಶ ಕಾರ್ನಾಡ ಅವರು ಈ ಕಥೆಯನ್ನು ದೃಶ್ಯ ರೂಪಕ್ಕಿಳಿಸಲು ಪ್ರಯತ್ನಿಸಿದ್ದರಂತೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ನಿರ್ದೇಶಕ ಗಿರೀಶ ಕಾಸರವಳ್ಳಿ ಅವರೂ ಈ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದರಂತೆ. ಕೊನೆಗೆ, ಶಿವರುದ್ರಯ್ಯ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಗಿರೀಶ ಕಾಸರವಳ್ಳಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಕೆ. ಕಲ್ಯಾಣ್‌ ಸಂಗೀತ ನೀಡಿದ್ದಾರೆ. ವಿಜಯ ಪ್ರಕಾಶ್‌, ಅನುರಾಧ ಭಟ್‌, ಚಿಂತನ್‌ ಧ್ವನಿಯಾಗಿದ್ದಾರೆ. ಬಿ.ಆರ್. ವಿಶ್ವನಾಥ್‌ ಅವರ ಛಾಯಾಗ್ರಹಣವಿದೆ. ಎಂ.ಎನ್‌. ಸ್ವಾಮಿ ಅವರ ಸಂಕಲನವಿದೆ.

ಸ್ಮೋಯಿ ಜೋಸೆಫ್‌ ಪಾಯ್ಸ್‌ ಬಂಡವಾಳ ಹೂಡಿದ್ದಾರೆ. ರಾಮನಾಗಿ ಮಾಸ್ಟರ್‌ ಆರೋನ್‌ ನಟಿಸಿದ್ದಾನೆ. ಸೋನುಗೌಡ, ರಾಜೇಶ್‌ ನಟರಂಗ, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣನ್‌, ಶೃಂಗೇರಿ ರಾಮಣ್ಣ ತಾರಾಗಣದಲ್ಲಿದ್ದಾರೆ. ಹೊಸನಗರದ ಸುತ್ತಮುತ್ತ ಇದರ ಚಿತ್ರೀಕರಣ ನಡೆಸಲಾಗಿದೆ. ಇದೇ ಶುಕ್ರವಾರ ಸಿನಿಮಾ ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT