ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ರಂಭಾ ಕಾರು ಅಪಘಾತ: ಮಕ್ಕಳು ಸೇರಿ ನಟಿ ಅಪಾಯದಿಂದ ಪಾರು

Last Updated 1 ನವೆಂಬರ್ 2022, 10:14 IST
ಅಕ್ಷರ ಗಾತ್ರ

ಬೆಂಗಳೂರು: ಬಹುಭಾಷಾ ನಟಿ ರಂಭಾಕಾರುಕೆನಡಾದಲ್ಲಿ ಅಪಘಾತವಾಗಿದ್ದು, ರಂಭಾ ಮತ್ತು ಪುತ್ರಿಯರು ಅಪಾಯದಿಂದ ಪರಾಗಿದ್ದಾರೆ.

ಘಟನೆಯಲ್ಲಿ ರಂಭಾ ಹಾಗೂ ಹಿರಿಯ ಪುತ್ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಕಿರಿಯ ಪುತ್ರಿ ಸಾಶಾಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ರಂಭಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿರುವಾಗ ನಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆಯಿತು. ನನಗೆ ಹಾಗೂ ಹಿರಿಯ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಆದರೆ ಕಿರಿಯ ಪುತ್ರಿ ಸಹಾಗೆ ಹೆಚ್ಚು ಗಾಯಗಳಾಗಿದ್ದು ನಾವು ಅಪಾಯದಿಂದ ಪಾರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಮಗಳ ಚೇತರಿಕೆಗೆ ಪ್ರಾರ್ಥಿಸುವಂತೆ ಅವರು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಕಿರಿಯ ಮಗಳ ಫೋಟೊ ಹಾಗೂ ಅಪಘಾತದಿಂದ ಜಖಂಗೊಂಡಿರುವ ಕಾರಿನ ಫೋಟೊಗಳನ್ನು ರಂಭಾ ಪೋಸ್ಟ್‌ ಮಾಡಿದ್ದಾರೆ.

ನಟಿ ರಂಭಾ ಅವರು, ಪತಿ ಹಾಗೂ ಪುತ್ರಿಯರೊಂದಿಗೆ ಕೆನಾಡದಲ್ಲಿ ವಾಸವಾಗಿದ್ದಾರೆ. ರಂಭಾ ಪುತ್ರಿಯರು ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

90ರ ದಶಕದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಹೆಚ್ಚು ಖ್ಯಾತಿಯಾಗಿದ್ದರು. ಕನ್ನಡದಲ್ಲಿ ರಂಭಾ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕೆಂಪಯ್ಯ ಐಪಿಎಸ್', 'ಓ ಪ್ರೇಮವೇ', 'ಬಾವ ಬಾಮೈದ', 'ಸಾಹುಕಾರ', 'ಪಾಂಡು ರಂಗ ವಿಠಲ', 'ಗಂಡುಗಲಿ ಕುಮಾರ ರಾಮ', 'ಅನಾಥರು' ಸೇರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT