‘ರ‍್ಯಾಂಬೊ ಲಾಸ್ಟ್‌ ಬ್ಲಡ್‌’ ಸೆಪ್ಟೆಂಬರ್‌ನಲ್ಲಿ ತೆರೆಗೆ

ಬುಧವಾರ, ಮಾರ್ಚ್ 20, 2019
31 °C

‘ರ‍್ಯಾಂಬೊ ಲಾಸ್ಟ್‌ ಬ್ಲಡ್‌’ ಸೆಪ್ಟೆಂಬರ್‌ನಲ್ಲಿ ತೆರೆಗೆ

Published:
Updated:
Prajavani

ಅಮೆರಿಕದ ಸಿನಿಮಾ ಪ್ರಿಯರಿಗೆ ‘ರ‍್ಯಾಂಬೊ’ ಸರಣಿ ಗೊತ್ತಿರಲೇಬೇಕು. ಸರಣಿಯಲ್ಲಿ ನಾಲ್ಕು ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದು, ಇದೀಗ ಐದನೆಯ ಮತ್ತು ಕೊನೆಯದೆನ್ನಲಾದ ‘ರ‍್ಯಾಂಬೊ ಲಾಸ್ಟ್‌ ಬ್ಲಡ್‌’ ಚಿತ್ರೀಕರಣ ಮುಗಿದಿದ್ದು, ಚಿತ್ರೀಕರಣೋತ್ತರ ಕೆಲಸಗಳು ನಡೆದಿದೆ.

ಹಾಲಿವುಡ್‌ನ ಹಲವು ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರಗಳಲ್ಲಿ ರೋಮಾಂಚಕಾರಿಯಾಗಿ ನಟಿಸಿರುವ ಸಿಲ್ವೆಸ್ಟರ್‌ ಸ್ಟಾಲೊನ್‌ ‘ರ‍್ಯಾಂಬೊ’ ಪಾತ್ರ ಕಾಲ್ಪನಿಕವಲ್ಲ ಎಂಬ ಭ್ರಮೆ ಹುಟ್ಟುವಂತೆ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ‘ರ‍್ಯಾಂಬೊ ಲಾಸ್ಟ್‌ ಬ್ಲಡ್‌’ನಲ್ಲಿ ಈ ಹಿಂದೆಂದಿಗಿಂತಲೂ ಅದ್ಭುತವಾಗಿ ನಟಿಸಿದ್ದಾರೆ ಎಂಬುದಕ್ಕೆ ಚಿತ್ರದ ಟ್ರೇಲರ್‌ಗಳು ಸಾಕ್ಷಿ.

‘ರ‍್ಯಾಂಬೊ ಲಾಸ್ಟ್‌ ಬ್ಲಡ್‌’ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಆಡ್ರಿಯನ್‌ ಗ್ರೂನ್‌ಬರ್ಗ್‌ ಪ್ರಕಟಿಸಿದ್ದಾರೆ. ಸೆಪ್ಟೆಂಬರ್‌ 20ರಂದು ಚಿತ್ರ ತೆರೆಕಾಣಲಿದೆ. ಈ ಆವೃತ್ತಿಗೆ ಸ್ಟಾಲೊನ್‌ ಮತ್ತು ಮ್ಯಾಟ್‌ ಸಿರುಲ್ನಿಕ್‌ ಚಿತ್ರಕತೆ ಬರೆದಿದ್ದಾರೆ. ಅಮೆರಿಕದ ಅರಿಜೋನಾ ಪ್ರದೇಶದ ನಿವಾಸಿಯಾಗಿ ರ‍್ಯಾಂಬೊ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರ ಡಿಜಿಟಲ್‌ ಮಾಧ್ಯಮದಲ್ಲೂ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !