ಶುಕ್ರವಾರ, ಸೆಪ್ಟೆಂಬರ್ 20, 2019
21 °C

ರಮೇಶ್ ಅರವಿಂದ್‌ಗೆ ವಿಷ್ಣುವರ್ಧನ್‌ ಪ್ರಶಸ್ತಿ ಪುರಸ್ಕಾರ

Published:
Updated:
Prajavani

ಬೆಂಗಳೂರು: ವಿಷ್ಣು ಸೇನಾ ಸಮಿತಿ ನೀಡುವ ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿಗೆ ನಟ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

₹25 ಸಾವಿರ ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ. ವಿಷ್ಣುವರ್ಧನ್‌ ಅವರ 69ನೇ ಜನ್ಮದಿನದ ಅಂಗವಾಗಿ ಇದೇ 18 ರಿಂದ ಮೂರು ದಿನ ವಿಷ್ಣುವರ್ಧನ್‌ ನಾಟಕೋತ್ಸವ ನಡೆಯಲಿದೆ. ಮೊದಲ ದಿನ ಸಂಜೆ 4.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

Post Comments (+)