ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

58ರ ಸಂಭ್ರಮದಲ್ಲಿ ರಮೇಶ್‌: ಶಿವಾಜಿ ಸುರತ್ಕಲ್‌ – 2 ಚಿತ್ರದ ಟೀಸರ್‌ ಬಿಡುಗಡೆ

Published : 10 ಸೆಪ್ಟೆಂಬರ್ 2022, 8:19 IST
ಫಾಲೋ ಮಾಡಿ
Comments

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಶನಿವಾರ (ಸೆ. 10) 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ ಅವರ ‘ಶಿವಾಜಿ ಸುರತ್ಕಲ್ 2 - ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 2020ರಲ್ಲಿ ಬಿಡುಗಡೆಯಾದ ‘ಶಿವಾಜಿ ಸುರತ್ಕಲ್’ ಸಿನಿಮಾದ ಎರಡನೇ ಭಾಗ ಇದು.

ರಮೇಶ್‌ ಅವರು ಇದುವರೆಗೆ ಅಭಿನಯಿಸಿದ್ದ ಸಿನಿಮಾಗಳ ಸಂಖ್ಯೆ ಸುಮಾರು 140. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ತುಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಯಶಸ್ವಿ ನಿರ್ದೇಶಕರೂ ಹೌದು.

ಇಂದು ಶಿವಾಜಿ ಸುರತ್ಕಲ್‌ –2 ಚಿತ್ರತಂಡ ಟೀಸರ್‌ ಬಿಡುಗಡೆಯ ಹಿನ್ನೆಲೆಯಲ್ಲಿ ಒಂದೆಡೆ ಸೇರಿ ರಮೇಶ್‌ ಅವರ ಹುಟ್ಟುಹಬ್ಬ ಆಚರಿಸಿದರು. ಈ ಸಂಭ್ರಮ ನಡೆದದ್ದು ನಾಗಸಂದ್ರದ ಐಕಿಯಾ ಮಾಲ್‌ನಲ್ಲಿ. ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಚಿತ್ರದ ನಿರ್ದೇಶಕ ಆಕಾಶ್‌ ಶ್ರೀವತ್ಸ, ನಾಯಕಿಯರಾದ ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌ ಸಹಿತ ಚಿತ್ರರಂಗದ ಪ್ರಮುಖರು ಹಾಜರಿದ್ದರು.

ಹುಟ್ಟುಹಬ್ಬದ ಶುಭಾಶಯ ಕೋರಲು ರಮೇಶ್‌ ಅರವಿಂದ್‌ ಅವರು ವಾಟ್ಸ್‌ ಆ್ಯಪ್‌ ಸಂಖ್ಯೆ ಕೊಟ್ಟಿದ್ದರು. ಅದಕ್ಕೆ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. 89515 9909,89516 9909 ಸಂಖ್ಯೆಗೆ ಅಭಿಮಾನಿಗಳು ಸಂದೇಶ ಕಳುಹಿಸುತ್ತಿದ್ದಾರೆ. ರಮೇಶ್‌ ಅವರೂ ಕೂಡಾ ಖುಷಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ನಿರ್ದೇಶಕ ಕೆ. ಬಾಲಚಂದರ್‌ ಅವರ ‘ಸುಂದರ ಸ್ವಪ್ನಗಳು’ (1986) ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆಯನ್ನು ಪ್ರವೇಶಿಸಿದರು. ಮುಂದೆ ತಮಿಳು, ತೆಲುಗು ಚಿತ್ರರಂಗದಲ್ಲೂ ಅವಕಾಶಗಳು ಬಂದವು. ನಟನೆ– ನಿರ್ದೇಶನದ ಜೊತೆ ಬರಹಗಾರ, ಸ್ಫೂರ್ತಿದಾಯಕ ಮಾತುಗಾರ, ಜನಪ್ರಿಯ ಟಿವಿ ಕಾರ್ಯಕ್ರಮ ವೀಕೆಂಡ್‌ ವಿತ್‌ ರಮೇಶ್‌ನ ನಿರೂಪಕರಾಗಿಯೂ ಅವರು ಖ್ಯಾತರಾಗಿದ್ದಾರೆ.

ಅಮೆರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ಅಮೃತವರ್ಷಿಣಿ ಸೇರಿದಂತೆ ಅವರು ಅಭಿನಯಿಸಿದ ಹಲವಾರು ಚಿತ್ರಗಳು ಸೂಪರ್‌ ಹಿಟ್‌ ಪ್ರದರ್ಶನ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT